ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕಂಪಾಡಿ: ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಚಲೋ ಪ್ರತಿಭಟನೆ

ಮಾಲಿನ್ಯ ತಡೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆರಿಸುತ್ತಿರುವ, ಫಲ್ಗುಣಿ ನದಿ ಸಹಿತ ಸುತ್ತಲ ಗ್ರಾಮಗಳ ನೆಲ ಜಲವ‌ನ್ನು ವಿಷಮಯಗೊಳಿಸುತ್ತಿರುವ, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಎಂ ಆರ್ ಪಿ ಎಲ್, ಸೆಝ್, ಅದಾನಿ ವಿಲ್ಮಾ, ಬಾಬಾ ರಾಮದೇವ್ ಮಾಲಕತ್ವದ ರುಚಿಗೋಲ್ಡ್ ಮತ್ತಿತರ ಕೈಗಾರಿಕೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟಿಸಲಾಯಿತು.

ಜೋಕಟ್ಟೆ, ಕಳವಾರು ವ್ಯಾಪ್ತಿಯಲ್ಲಿ 27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರಿ ಆದೇಶ ಧಿಕ್ಕರಿಸುತ್ತಿರುವ ಎಂಆರ್‌ಪಿಎಲ್ ಗೆ ಬೀಗ ಜಡಿಯಲು ಒತ್ತಾಯಿಸಿ ಮುಂಗಾರು ಜಂಕ್ಷನ್ ನಿಂದ ಮೆರವಣಿಗೆ ಹೊರಟು ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂಭಾಗ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಚಲೋ ಪ್ರತಿಭಟನೆಯನ್ನು "ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ವತಿಯಿಂದ ಕಚೇರಿ ಚಲೋ ಪ್ರತಿಭಟನೆ ನಡೆಸಲಾಯಿತು.

Edited By :
Kshetra Samachara

Kshetra Samachara

22/08/2022 07:19 pm

Cinque Terre

4.34 K

Cinque Terre

1

ಸಂಬಂಧಿತ ಸುದ್ದಿ