ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೋವಾ ಸಿಎಂ ಮಾಂಸಾಹಾರ ಸೇವಿಸಿರಲಿಲ್ಲ; ಅಧಿಕಾರಿಗಳು ತಿಂದಿದ್ದರು; ರಘುಪತಿ ಭಟ್ ಸ್ಪಷ್ಟನೆ!

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವಾಗ ಮಾಂಸಾಹಾರ ಸೇವನೆ ಮಾಡಿರಲಿಲ್ಲ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವಂತ್ ಮಧ್ಯಾಹ್ನ ಊಟ ಮಾಡುವಾಗ ನಾನು ಜೊತೆಯಲ್ಲಿದ್ದೆ. ಸಾವಂತ್ ಊಟಕ್ಕೆ ಯಾವುದೇ ಮಾಂಸಹಾರ ಸೇವಿಸಿಲ್ಲ. ಆದರೆ ಸಿಎಂ ಜೊತೆಗೆ ಬಂದಿದ್ದ ಸಿಬ್ಬಂದಿಗಳಿಗೆ ಮಾಂಸಾಹಾರ ಊಟದ ವ್ಯವಸ್ಥೆ ಇತ್ತು ಎಂದರು.

ಗೋವಾ ಸಿಎಂ ಸಾವಂತ್ ಮಾಂಸಹಾರ ಸೇವಿಸಿ ಮಠಕ್ಕೆ ಹೋಗಿದ್ದಾರೆ ಎಂದು ಆರೋಪಿಸುವವರ ಬಳಿ ಏನು ಸಾಕ್ಷ್ಯ ಇದೆಯೋ ನನಗೆ ಗೊತ್ತಿಲ್ಲ.ಅವರು ಹೋಟೇಲಿನ ಮೆನು ನೋಡಿ ಹೇಳಿದ್ದಾರೇನೋ ಗೊತ್ತಿಲ್ಲ. ಸಿಎಂ ಜೊತೆ 40 - 50 ಅಧಿಕಾರಿಗಳು ಬಂದಿದ್ದರು. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೀನನ್ನು ಆರ್ಡರ್ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಚುನಾವಣೆ ಹತ್ತಿರ ಬಂದಿರುವುದರಿಂದ ಈ ಆರೋಪ ಬಂದಿದೆ. ಸಿದ್ದರಾಮಯ್ಯ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಫೋಟೊ ಸಮೇತ ಸಾಕ್ಷಿ ಇಟ್ಟು ಬಿಜೆಪಿ ಮಾತನಾಡಿತ್ತು.

ಸಿದ್ದರಾಮಯ್ಯ ನಾನು ತಪ್ಪಿ ಹೋದೆ, ನೆನಪಿಲ್ಲ ಎಂದಿದ್ದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಅವರು ನಾನು ದನದ ಮಾಂಸ ತಿಂದು ಹೋಗುತ್ತೇನೆ, ಏನಾಗುತ್ತದೆ ಎಂದು ದರ್ಪದಿಂದ ಮಾತನಾಡಿದ್ದರು. ಕಾಂಗ್ರೆಸ್ ನವರು ಫೋಟೊ, ವೀಡಿಯೊ ನೀಡಿ ಮಾತನಾಡಲಿ ಎಂದು ರಘುಪತಿ ಭಟ್ ಸವಾಲು ಹಾಕಿದರು.

Edited By :
PublicNext

PublicNext

11/10/2022 12:57 pm

Cinque Terre

23.05 K

Cinque Terre

6

ಸಂಬಂಧಿತ ಸುದ್ದಿ