ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರಂತರು ಬರೀ ಸಾಹಿತಿಯಲ್ಲ, ಬಹುಮುಖಿಯಾಗಿ ಕೆಲಸ ಮಾಡಿದವರು: ಡಾ.ಬಿ.ಎ.ವಿವೇಕ ರೈ

ಮಂಗಳೂರು: ಕೋಟ‌ ಶಿವರಾಮ ಕಾರಂತರು ನಮ್ಮ ದೇಶ ಕಂಡಂತಹ ಸಾಹಿತಿ, ಮೇಧಾವಿ ಹಾಗೂ ಹೋರಾಟಗಾರ. ಆದ್ದರಿಂದ ಕಾರಂತರು ಬಹುಮುಖಿಯಾಗಿ ಕೆಲಸ ಮಾಡಿದವರು‌. ಹಾಗಾಗಿ ಅವರನ್ನು ಸಾಹಿತಿ ಮಾತ್ರ ಎಂದು ಹೇಳಲು ಅಸಾಧ್ಯ. ಅವರು ಪರಿಸರ ಹೋರಾಟಗಾರ, ಚುನಾವಣೆಗೆ ಸ್ಪರ್ಧಿಸಿದ್ದರು. ಅಂದರೆ ಇಂದು ನಾವು ಅವರಂತಹ ಧೈರ್ಯವಂತರನ್ನು ಕಾಣಲು ಅಸಾಧ್ಯ ಎಂದು ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ‌.ಬಿ.ಎ.ವಿವೇಕ ರೈ ಹೇಳಿದರು.

ನಗರದ ಜನತಾ ಡಿಲಕ್ಸ್ ನ ಪತ್ತುಮುಡಿ ಸೌಧದಲ್ಲಿ ಕಾರಂತ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 45 ಕಾದಂಬರಿಗಳು, 16 ನಾಟಕಗಳು, 8 ವಿಶ್ವಕೋಶಗಳು, ವಿಚಾರ ಸಾಹಿತ್ಯ, ಪ್ರವಾಸ ಸಾಹಿತ್ಯ ಇತ್ಯಾದಿ ಹಲವಾರು ವಿಚಾರಗಳಲ್ಲಿ ಅವರು ಕೈಯಾಡಿಸಿದವರು. ಒಂದು ವೇಳೆ ಕಾರಂತರ, ಬೇಂದ್ರೆ, ಕುವೆಂಪುರವರ ಕೃತಿಗಳು ಹಿಂದೆ ಇಂಗ್ಲಿಷ್ ಗೆ ಅನುವಾದ ಆಗುತ್ತಿದ್ದರೆ ಯಾವಾಗಲೋ ಅವರಿಗೆ ನೊಬೆಲ್ ಪ್ರಶಸ್ತಿ ಲಭ್ಯವಾಗುತ್ತಿತ್ತು. ನಮ್ಮ ದುರಾದೃಷ್ಟವೆಂದರೆ ನಮ್ಮಲ್ಲಿ ಹಿಂದೆ ಅನುವಾದ ಮಾಡುವ ಕ್ರಮ ಇರಲಿಲ್ಲ ಎಂದರು.

ಕಾರಂತರು ಅವರ ಜಾತಿಯನ್ನು ಬಿಟ್ಟರು. ಕಾರಂತರು ಜಾತಿ ಹಾಗೂ ಹಣ ಎರಡನ್ನೂ ಧಿಕ್ಕರಿಸಿದವರು. ಕಾರಂತರನ್ನು ಹೊಗಳೋದನ್ನು ಅವರು ಇಷ್ಟಪಡುತ್ತಿರಲಿಲ್ಲ. ಗಾಂಧಿಯವರ ಚಳುವಳಿಯಿಂದ ಪ್ರಭಾವಿತರಾದ ಅವರು ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಅರ್ಧಕ್ಕೆಕ್ಕೇ ಮೊಟಕುಗೊಳಿಸಿದವರು‌‌. ಅವರು ಎಂದೂ ಗಾಂಧೀಜಿಯವರನ್ನು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ. ಆದರೆ ಅವರ ತತ್ತ್ವ ಗಾಂಧೀ ತತ್ತ್ವವಾಗಿತ್ತು. ಅವರು ಕಾಲ್ನಡಿಗೆಯಲ್ಲಿಯೇ ಪ್ರಯಾಣ ಮಾಡಿ ಅನುಭವವನ್ನು ಪಡೆದವರು ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

10/10/2022 07:07 pm

Cinque Terre

8.18 K

Cinque Terre

0

ಸಂಬಂಧಿತ ಸುದ್ದಿ