ಉಡುಪಿ: ಇವತ್ತು ಉಡುಪಿ ಪ್ರವಾಸದಲ್ಲಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.ಕಡಗೋಲ ಕೃಷ್ಣನ ದರ್ಶನ ಕೈಗೊಂಡ ಸಿಎಂಗೆ ಪರ್ಯಾಯ ಕೃಷ್ಣಾಪುರ ಮಠದಿಂದ ಗೌರವ ಸಮರ್ಪಣೆ ಮಾಡಲಾಯಿತು.
ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು , ರಾಹುಲ್ ಗಾಂಧಿ ಈ ಪಾದಯಾತ್ರೆಯನ್ನು 1947ರಲ್ಲೇ ಮಾಡಬೇಕಿತ್ತು.ಅಂದು ಭಾರತ್ ಜೋಡೋ ಮಾಡಿದ್ದರೆ ಗೋವಾ ವಿಮೋಚನೆ ತಡವಾಗುತಿರಲಿಲ್ಲ.
1950 ಕ್ಕಾದರೂ ನಮಗೆ ವಿಮೋಚನೆ ಸಿಗುತ್ತಿತ್ತು. 1955ರಲ್ಲಿ ಪೋರ್ಚುಗೀಸರ ವಿರುದ್ಧ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಯುದ್ಧ ಮಾಡಬೇಕಾಯಿತು.ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು.ಅಂದು ಭಾರತ ಜೋಡೋ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈಶಾನ್ಯ ಭಾರತ ಸಂಪೂರ್ಣ ನಮ್ಮ ಅವಿಭಾಜ್ಯ ಅಂಗವಾಗಿ ಇರುತ್ತಿತ್ತು ಎಂದ ಅವರು,ಪೂರ್ಣ ಕಾಶ್ಮೀರ ಒಳಗೊಂಡ ಅಖಂಡ ಭಾರತ ಇರುತ್ತಿತ್ತು.ಪ್ರಧಾನಮಂತ್ರಿಗಳ ದೂರದರ್ಶಿತ್ವ ಕಂಡು ಅನ್ಯ ಪಕ್ಷಗಳ ನಾಯಕರು ಬಿಜೆಪಿಗೆ ಬರುತ್ತಿದ್ದಾರೆ.ಅಖಂಡ ಭಾರತ, ನವ ಭಾರತದ ಕನಸು ಕಾಣುವ ಯುವಕರಿಗೆ ಪ್ರಧಾನಿ ಪ್ರೇರಣೆಯಾಗಿದ್ದಾರೆ.ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕನಸಿಗೆ ಕೈಜೋಡಿಸುತ್ತಿದ್ದಾರೆ.ನವ ಭಾರತದ ನಿರ್ಮಾಣದ ಕನಸಿನಿಂದಲೇ ಗೋವಾದಲ್ಲಿ ಅನ್ಯಪಕ್ಷೀಯರು ಬಿಜೆಪಿಗೆ ಬಂದಿದ್ದಾರೆ.
ಅಲ್ಲಿ ನಡೆದ ಮ್ಯಾಜಿಕ್ ದೇಶದ ಬೇರೆಡೆಯೂ ಆಗಬಹುದು ಎಂದು ಹೇಳಿದರು.
PublicNext
08/10/2022 09:39 pm