ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗ್ರಾಮಸ್ವರಾಜ್ ಕನಸಿಗೆ ಸರಕಾರದಿಂದಲೇ ಕೊಡಲಿಯೇಟು: ಡಾ.ದೇವಿಪ್ರಸಾದ್ ಶೆಟ್ಟಿ

ಉಡುಪಿ: ವ್ಯವಸ್ಥಿತ ಪಿತೂರಿಯೊಂದಿಗೆ ರಾಜ್ಯ ಸರಕಾರ ಆದೇಶವೊಂದನ್ನು ಪಂಚಾಯತ್ ಗಳಿಗೆ ರವಾನಿಸಿ, ಈ ಕೂಡಲೇ ಜಾರಿಗೆ ಬರುವಂತೆ ಅಧ್ಯಕ್ಷ ಹಾಗೂ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಿದೆ. ತನ್ಮೂಲಕ ಗ್ರಾಮಸ್ವರಾಜ್ ಕನಸಿಗೆ ಅದು ಕೊಡಲಿಯೇಟನ್ನು ನೀಡಿರುವುದಾಗಿ ರಾಜ್ಯ ಪಂಚಾಯತ್ ರಾಜ್ ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.

ಅಧಿಕಾರದ ವಿಕೇಂದ್ರಿಕರಣದ ಆಶಯಗಳನ್ನು ಹೊತ್ತು ಅನುಷ್ಠಾನಿಸಲ್ಪಟ್ಟಿದ್ದ ಪಂಚಾಯ ರಾಜ್ ವ್ಯವಸ್ಥೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಹತ್ವದ ಸ್ಥಾನವನ್ನು ನೀಡಲಾಗಿತ್ತು. ಗ್ರಾಮಸರಕಾರದ ನಿರ್ಧಾರವೂ ವಿಧಾನಸಭೆಯ ತೀರ್ಮಾನದಂತೆಯೇ ಕಾನೂನಾತ್ಮವಾಗಿ ಅನುಷ್ಠಾನಿಸಲ್ಪಡುವಂತಿತ್ತು, ಹೀಗಿರುವಾಗ ಈಗಿನ ಸರಕಾರ ಪಂಚಾಯತ್ ಪ್ರತಿನಿಧಿಗಳಿಗೆ ಇದ್ದ ಅಧಿಕಾರವನ್ನೇ ಕಸಿದುಕೊಂಡಿದೆ.

ವಿಧಾನಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೇ ಏಕಾಏಕಿ ಆದೇಶವೊಂದನ್ನು ರವಾನಿಸಿ ಅಧಿಕಾರಶಾಹಿ ವ್ಯವಸ್ಥೆಗೆ ಸರಕಾರವೇ ಬೆಂಬಲವನ್ನೂ ಈ ಮೂಲಕ ನೀಡಿದೆ ಎಂದು ಆರೋಪಿದ್ದಾರೆ.

ಪಂಚಾಯತ್ ವ್ಯವಸ್ಥೆಯಲ್ಲಿ ಇನ್ನು ಮುಂದಕ್ಕೆ ಯಾವುದೇ ಬಿಲ್ ಪಾಸ್ ಮಾಡುವ ಅಥವಾ ಚೆಕ್ ಮೂಲಕ ಪಾವತಿ ಮಾಡುವ ವ್ಯವಸ್ಥೆಗೆ ಅಧ್ಯಕ್ಷರು ನಹಿ ಮಾಡುವ ಹಾಗಿಲ್ಲ. ಈ ಅಧಿಕಾರವನ್ನು ಪಿಡಿಓ ಹಾಗೂ ಲೆಕ್ಕ ಸಹಾಯಕರಿಗೆ ಜಂಟಿಯಾಗಿ ನೀಡಲಾಗಿದೆ. ಇದಕ್ಕೆ ಮುಂದೆ ಜನರಿಂದಲೇ ತಕ್ಕ ಶಾಸ್ತಿಯಾಗಲಿದೆ ಎಂದು ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

08/10/2022 05:08 pm

Cinque Terre

4.46 K

Cinque Terre

4