ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಿಎಫ್ ಐನ ಹುನ್ನಾರದ ವಿರುದ್ಧ ಕಠಿಣ ಕ್ರಮಕ್ಕೆ ವಿಎಚ್ ಪಿ, ಬಜರಂಗದಳ ಆಗ್ರಹ

ಮಂಗಳೂರು: ನಿಷೇಧಿತ ಸಂಘಟನೆ ಪಿಎಫ್ಐ ರಸ್ತೆಯಲ್ಲಿ ಬರಹಗಳನ್ನು ಬರೆದು ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಬೇಕೆಂದು ವಿಎಚ್ ಪಿ - ಬಜರಂಗದಳ ಆಗ್ರಹಿಸಿದೆ.

ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಮತ್ತು ಪಿಲಾತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಕೋಮು ಸಂಘರ್ಷವನ್ನು ಹುಟ್ಟುಹಾಕಲು ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್ಐ 'ಚಡ್ಡಿಗಳೇ ಎಚ್ಚರ ಪಿಎಫ್ಐನಾವು ಮರಳಿ ಬರುತ್ತೇವೆ' ಎಂಬ ಬರಹಗಳನ್ನು ರಸ್ತೆಯಲ್ಲಿ ಬರೆಯಲಾಗಿದೆ. ಇದೊಂದು ಭಯೋತ್ಪಾದಕ ಕೃತ್ಯ. ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್ಐ ಯಾವುದೇ ಚಟುವಟಿಕೆ ನಡೆಸಿದರೂ ಅದು ಭಯೋತ್ಪಾದಕ ಚಟುವಟಿಕೆಯೇ ಆಗಿದೆ.

ಆದ್ದರಿಂದ ತಕ್ಷಣ ಪೊಲೀಸ್ ಇಲಾಖೆ ಕೃತ್ಯ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಅಲ್ಲದೆ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕೆಂದು ಬಜರಂಗದಳ ವಿಭಾಗ ಸಂಚಾಲಕ್ ಭುಜಂಗ ಕುಲಾಲ್ ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/10/2022 06:42 pm

Cinque Terre

4.44 K

Cinque Terre

0