ಮಂಗಳೂರು: ಆಹಾರದಲ್ಲಿದ್ದ ಹಲಾಲ್ ಜಿಹಾದ್ ಇದೀಗ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದು, ಇದು ದೇಶದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಕೇಂದ್ರ ಸರಕಾರ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ರದ್ದುಪಡಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಮೇಶ್ ಶಿಂಧೆ ಆಗ್ರಹಿಸಿದರು.
ಈ ಬಗ್ಗೆ ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಇಂದು ಹಲಾಲ್ ಪ್ರಮಾಣಪತ್ರ ಖಾದ್ಯ ಪದಾರ್ಥ, ಸೌಂದರ್ಯ ಸಾಧನ, ಔಷಧಿ, ಆಸ್ಪತ್ರೆ, ಗೃಹನಿರ್ಮಾಣ ಕ್ಷೇತ್ರಗಳಿಗೂ ವ್ಯಾಪಿಸಿದೆ. ಆಹಾರದಲ್ಲಿ ಹಲಾಲ್ ಮುಸ್ಲಿಂ ಸಮುದಾಯದವರಿಗೆ hhhಮಾತ್ರ ಅಗತ್ಯ. ಆದರೆ, ಎಲ್ಲಾ ಸಮುದಾಯದವರಿಗೂ ಅನ್ವಯವಾಗುವಂತೆ ಹಲಾಲ್ ಪ್ರಮಾಣಪತ್ರ ನೀಡುವುದು ಇತರರ ಸಾಂವಿಧಾನಿಕ ಹಕ್ಕನ್ನು ಕಸಿಯುವಂತಾಗುತ್ತದೆ ಎಂದು ಹೇಳಿದರು.
ಹಲಾಲ್ ಪ್ರಮಾಣಪತ್ರವನ್ನು ಜಮೀಯತ್ತುಲ್ ಉಲೇಮಾ ಸಂಸ್ಥೆ ನೀಡುತ್ತದೆ. ಈ ಸಂಸ್ಥೆಯು ಹಲಾಲ್ ಪ್ರಮಾಣ ಪತ್ರದಿಂದ ಬರುವ ಆದಾಯವನ್ನು ಭಯೋತ್ಪಾದನಾ ಕೃತ್ಯ ಎಸಗುವವರಿಗೆ ವಿನಿಯೋಗಿಸುತ್ತಿದೆ. ಆದ್ದರಿಂದ ಸರಕಾರ ಹಲಾಲ್ ಪ್ರಮಾಣಪತ್ರ ನೀಡುವುದನ್ನು ತಕ್ಷಣ ರದ್ದುಪಡಿಸಬೇಕೆಂದು ರಮೇಶ್ ಶಿಂಧೆ ಒತ್ತಾಯಿಸಿದರು.
PublicNext
01/10/2022 10:47 pm