ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ನಾಪತ್ತೆಯಾಗಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದು ಕಳಿಸಿದರೆ 5 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದು ಕಾಂಗ್ರೆಸ್ ಯುವನಾಯಕ ಮಿಥುನ್ ರೈ ಮೊನ್ನೆ ಉಡುಪಿಯಲ್ಲಿ ವ್ಯಂಗ್ತವಾಡಿದ್ದರು. ಮಿಥುನ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಇವತ್ತು ಸಚಿವೆ ಜೊತೆ ಸೆಲ್ಫಿ ತೆಗೆಯುವುದರೊಂದಿಗೆ ಮಿಥುನ್ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸೇವಾ ಪಾಕ್ಷಿಕದ ಅಂಗವಾಗಿ ಖಾದಿ ಮೇಳವನ್ನು ಉದ್ಘಾಟಿಸಿದ ನಂತರ ಮಹಿಳಾಮೋರ್ಚಾ, ಯುವಮೋರ್ಚಾ ಕಾರ್ಯಕರ್ತರು ಸಚಿವೆಯೊಂದಿಗೆ ಸೆಲ್ಫಿ ತೆಗೆಯಲು ಮುಗಿ ಬಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕರ್ತೆಯರು, ಸಚಿವೆ ಜೊತೆ ಸೆಲ್ಪಿ ತೆಗೆದರೆ ಬಹುಮಾನ ನೀಡುವುದಾಗಿ ಕಾಂಗ್ರೆಸಿನ ಮಿಥುನ್ ರೈ ಹೇಳಿದ್ದಾರೆ. ಹೀಗಾಗಿ ಶೋಭಕ್ಕನ ಜೊತೆ ಮಹಿಳಾಮೋರ್ಚಾದ ತಂಡ ಸೆಲ್ಪಿ ತೆಗೆದು ಮಿಥುನ್ ರೈ ಅವರ ಸ್ಪರ್ಧೆಯಲ್ಲಿ ಭಾಗವಹಿಸಿದೆ ಎಂದು ಹೇಳಿದ್ದಾರೆ.
PublicNext
30/09/2022 12:44 pm