ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಿಎಫ್‌ಐ ನಿಷೇಧಿಸಿದ್ದನ್ನು ಕಾಂಗ್ರೆಸ್‌ ಮನಃಪೂರ್ವಕ ಸ್ವಾಗತಿಸಲಿ; ಸಚಿವ ಸುನಿಲ್ ಕುಮಾರ್

ಉಡುಪಿ: ಪಿಎಫ್ ಐ ನಿಷೇಧಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರಿಗೆ ತಳಮಳ ಯಾಕೆ? ಮನಃಪೂರ್ವಕವಾಗಿ ಇದನ್ನು ಸ್ವಾಗತಿಸಿ ಎಂದು ಉಡುಪಿಯಲ್ಲಿ ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುನಿಲ್ ,ನಾವು ಶಸ್ತ್ರಾಸ್ತ್ರದ ಮೂಲಕ ಇಸ್ಲಾಮೀಕರಣ ಮಾಡಲು ಹೊರಟವರನ್ನು ನಿಷೇಧಿಸಿದ್ದೇವೆ. ಆದರೆ ಕಾಂಗ್ರೆಸ್ ದೇಶಪ್ರೇಮಿ ಆರ್ ಎಸ್ ಎಸ್ ನ್ನು ಮೂರು ಬಾರಿ ನಿಷೇಧ ಮಾಡಿತ್ತು. ನಾವು ದೇಶದ್ರೋಹಿ ಪಿಎಫ್ ಐಯನ್ನು ನಿಷೇಧ ಮಾಡಿದ್ದೇವೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಇರುವ ವ್ಯತ್ಯಾಸ ಎಂದು ಹೇಳಿದರು.

ಆರ್ ಎಸ್ ಎಸ್ ನಿಷೇಧಿಸಿ ಎನ್ನುವ ನಿಮ್ಮ ಬುದ್ಧಿಮಟ್ಟ ಯಾವುದು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದ ಸುನಿಲ್, ನಮ್ಮದೇ ಸಂಘಟನೆಯನ್ನ ನಿಷೇಧ ಮಾಡಿದರು ಎಂಬ ಬೇಸರ ಸಿದ್ದರಾಮಯ್ಯರಿಗೆ ಇದ್ದಂತಿದೆ. ದೇಶಭಕ್ತ ಸಂಘಟನೆ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಬೇಡಿ. ಸಂವಿಧಾನ ವಿರೋಧಿ ನಡವಳಿಕೆಯನ್ನು ಯಾರೂ ಒಪ್ಪಬಾರದು. ಕಾಂಗ್ರೆಸ್ ತುಷ್ಟೀಕರಣ ಮಾಡಿದ್ದಕ್ಕೆ ದೇಶದಲ್ಲಿ ಇಷ್ಟೆಲ್ಲಾ ಆಯ್ತು. ದೇಶದಲ್ಲಿ ಪಿಎಫ್ ಐಯನ್ನು ಪೋಷಿಸಿದ್ದು, ಇದೇ ಕಾಂಗ್ರೆಸ್ ಎಂದು ಹೇಳಿದರು.

ಪಿ ಎಫ್ ಐ ನಿಷೇಧಿಸಿದ್ದನ್ನು ಸ್ವಾಗತಿಸಿದವರನ್ನು ನಾನು ಅಭಿನಂದಿಸುತ್ತೇನೆ ಎಂದ ಸಚಿವರು ,ರಾಜಕೀಯ ಮತ್ತು ಮತ ಬ್ಯಾಂಕು ದೃಷ್ಟಿಯಲ್ಲಿ ಇದನ್ನು ನೋಡಬಾರದು.

ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಸ್ವಾಗತಿಸಿದರೆ ಯಾವುದೇ ಪ್ರಯೋಜನ ಇಲ್ಲ. ಸ್ವಾಗತಿಸುವುದರಲ್ಲಿ ಭಾವನೆ ಬೇಕು, ಎಂದು ಹೇಳಿದ್ದಾರೆ.

Edited By : Shivu K
PublicNext

PublicNext

29/09/2022 02:21 pm

Cinque Terre

33.6 K

Cinque Terre

3

ಸಂಬಂಧಿತ ಸುದ್ದಿ