ಕಿನ್ನಿಗೋಳಿ: ರಾಜ್ಯಾದ್ಯಂತ ಇನ್ನು ಮುಂದಿನ ದಿನಗಳಲ್ಲಿ ಏಕ ಹಾಗೂ ಬಹು ನಿವೇಶನದ ಅನುಮೋದನೆ ಪಟ್ಟಣ ಮತ್ತು ನಗರ ಸಭೆಯಲ್ಲಿ ದೊರೆಯಲಿದೆ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಅವರು ಸೋಮವಾರ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿ ನಗರ ಹಾಗೂ ಗ್ರಾಮಂತರ ಯೋಜನೆಯ ಇಲಾಖೆಯ ಆಯುಕ್ತರ ಅನುಮೋದನೆ ಪಡೆಯುವುದು. ಇದರಿಂದ ಏಕ ಹಾಗೂ ಬಹು ನಿವೇಶನಗಳಿಗೆ ಅನು ಮೋದನೆಗೆ ತುಂಬಾ ಕಷ್ಟ ಸಾಧ್ಯವಾಗಿತ್ತು ಇದನ್ನು ಮನಗಂಡು ಕಿನ್ನಿಗೋಳಿಯ ಜಯ ಮೂಲ್ಯ ಹಾಗೂ ಇತರರು ರಾಜ್ಯ ಉಚ್ಚನಾಯ್ಯಲಯದಲ್ಲಿ ಇದರ ಬಗ್ಗೆ ದಾವೆ ಹೂಡಿದ್ದು, ಜಯ ಮೂಲ್ಯ ಪರವಾಗಿ ಜಯ ಬಂದಿದೆ.
ಇದರಿಂದ ಇನ್ನು ಮುಂದಕ್ಕೆ ಕಿನ್ನಿಗೋಳಿ ಪಟ್ಟಣ ಸಹಿತ ರಾಜ್ಯದ ಪಟ್ಟಣ ಪಂಚಾಯತ್ ನಗರ ಪಂಚಾಯತ್, ಪುರಸಭೆಯಲ್ಲಿ ಖಾತಾ ಮಾಡುವಾಗ ಏಕ ಹಾಗೂ ಬಹು ನಿವೇಶನ ಅನುಮೋದನೆ ಪಡೆಯಬೇಕಾಗಿಲ್ಲ ಖಾತಾ ಅಲ್ಲಿನ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ನಡೆಯಲಿದೆ ಇದರಿಂದ ಇಡೀ ರಾಜ್ಯಕ್ಕೆ ವರದಾನವಾಗಲಿದೆ ಎಂದರು ಸುದ್ದಿ ಗೋಷ್ಟಿಯಲ್ಲಿ ನ್ಯಾಯವಾದಿ ಶಶಿಧರ ಆಡ್ಕತ್ತಾಯ , ಈಶ್ವರ್ ಕಟೀಲು, ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
Kshetra Samachara
27/09/2022 09:30 am