ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: NIA ದಾಳಿ ಪೊಳ್ಳು,ಬಿಜೆಪಿ ಸರಕಾರಕ್ಕೆ ವಿಷ ಸೇವಿಸಿ ಸಾಯಬಹುದಲ್ಲವೇ ; ರಾಜೇಶ್ ಪವಿತ್ರನ್

ಮಂಗಳೂರು: ಹಿಂದೂ ನಾಯಕರ ಸರಣಿ ಹತ್ಯೆಯಾಗುತ್ತಿದೆ. ಆದರೆ ಬಿಜೆಪಿ ಸರಕಾರಕ್ಕೆ ಎನ್ ಐಎ ದಾಳಿ ಮಾಡಲಿಸಲು ಇಷ್ಟು ದಿನಗಳು ಬೇಕಿತ್ತೇ?. ಅದಲ್ಲದೆ ತನಿಖೆಯೆಂಬ ಪೊಳ್ಳು ದೊಂಬರಾಟ ಮಾಡುದಕ್ಕಿಂತ ಬಿಜೆಪಿ ಸರಕಾರಕ್ಕೆ ವಿಷ ಸೇವಿಸಿ ಸಾಯಬಹುದಲ್ಲವೇ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪ್ರವಿತ್ರನ್ ಆಗ್ರಹಿಸಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಎನ್ ಐಎ ದಾಳಿಯನ್ನು ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿಜವಾಗಿಯೂ ನೈತಿಕತೆಯಿದ್ದಲ್ಲಿ ಪಿಎಫ್ಐಯ ಉನ್ನತ ಮಟ್ಟದ ನಾಯಕರ ಬಂಧನ ಮಾಡಲಿ ಎಂದು ಹೇಳಿದರು.

ಚುನಾವಣಾ ಪೂರ್ವದಲ್ಲಿ ಹಿಂದುತ್ವ ಮಾತನಾಡುವ ಬಿಜೆಪಿಯವರು ಹರ್ಷನ ಕೊಲೆಯಾದಾಗಲೇ ಎಚ್ಚೆತ್ತುಕೊಂಡಿದ್ದರೆ ಪ್ರವೀಣ್ ನೆಟ್ಟಾರು ಹತ್ಯೆಯಾಗುತ್ತಿರಲಿಲ್ಲ. ಈ ಬಾರಿ ಬಿಜೆಪಿ ಚುನಾವಣಾ ಭೀತಿಯಲ್ಲಿದೆ. ಬಿಬಿಎಂಪಿ ಚುನಾವಣೆ ನಡೆದರೆ ಬಿಜೆಪಿ ಖಂಡಿತಾ ಸೋಲುತ್ತದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುತ್ತದೆ ಎಂದು ಚುನಾವಣೆಗಳನ್ನು ಹಿಂದಕ್ಕೆ ಹಾಕುತ್ತಾ ಬರುತ್ತಿದೆ. ಅದಕ್ಕಾಗಿಯೇ ಅವರು ನಾವು ಹಿಂದುತ್ವದ ಪರ ಇದ್ದೇವೆ ಎಂದು ತೋರಿಸಲು ಎನ್ಐಎ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಗೆ ಸಂಬಂಧ ಪಡದ ಹಿಂದೂ ಕಾರ್ಯಕರ್ತ ಸತ್ತರೂ, ಸತ್ತವರನ್ನು ತಮ್ಮ ಕಾರ್ಯಕರ್ತ ಎಂದು ಮತ ಕೇಳಲು ಹೋಗುತ್ತಿದೆ. ಅಷ್ಟೊಂದು ಗತಿಗೆಟ್ಟಿದ್ದಾರೆ ಬಿಜೆಪಿಯವರು. ಹಿಂದೂ ರಾಷ್ಟವಾದ ಭಾರತದಲ್ಲಿ ಯಾವುದೇ ಮುಸ್ಲಿಂ ಸಂಘಟನೆಗಳನ್ನು ರಿಜಿಸ್ಟರ್ ಮಾಡಲು ಅವಕಾಶ ಯಾಕೆ ಕೊಡುತ್ತಿದ್ದೀರಿ. ಮುಸಲ್ಮಾನರು ಈ ದೇಶದ ಬಹುಸಂಖ್ಯಾತರನ್ನು ಗೌರವಿಸುವಂತಹ ಕಾನೂನನ್ನು ಜಾರಿಗೊಳಿಸಿ. ಇದು ಸಾಧ್ಯವಾಗದಿದ್ದಲ್ಲಿ ಹಿಂದೂ ಸಮಾಜ ಜಾಗೃತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಲಿದೆ ಎಂದು ಬಿಜೆಪಿಗೆ ರಾಜೇಶ್ ಪವಿತ್ರನ್ ಎಚ್ಚರಿಕೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

24/09/2022 10:11 pm

Cinque Terre

6.04 K

Cinque Terre

1

ಸಂಬಂಧಿತ ಸುದ್ದಿ