ಉಡುಪಿ: ಬಿಜೆಪಿ ಸರಕಾರ ಹಿಂದುಳಿದ ವರ್ಗಗಳ ಪರ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಕಾಶ್ಮೀರದಲ್ಲೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟ ಸರಕಾರ ಇದ್ದರೆ ಅದು ಬಿಜೆಪಿ ಸರಕಾರ ಮಾತ್ರ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ,ಉಡುಪಿಯ ಮಥುರಾ ಕಂಫರ್ಟ್ಸ್ ನಲ್ಲಿ ನಡೆದ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಶಿಕ್ಷಣ ವರ್ಗವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಶಿಕ್ಷಣ ಬಿಜೆಪಿಯಲ್ಲಿ ನಿರಂತರ ನಡೆಯುವ ಪ್ರಕ್ರಿಯೆ.ಇಂತಹ ವ್ಯವಸ್ಥೆಗಳನ್ನು ಬೇರೆ ಪಕ್ಷದಲ್ಲಿ ಕಾಣಲು ಸಾದ್ಯವಿಲ್ಲ. ಪ್ರಶಿಕ್ಷಣದ ಮೂಲಕ ಹೊಸ ವಿಚಾರಗಳನ್ನು ಕಲಿಯಬಹುದು ಎಂದರು.
ಸಮಾರಂಭದ ಅದ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಅದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಹಿಸಿದ್ದರು. ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾದ ಗೀತಾಂಜಲಿ ಸುವರ್ಣ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
Kshetra Samachara
24/09/2022 09:57 pm