ಉಡುಪಿ : ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟ ಕಾಂಗ್ರೆಸ್'ನವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ನೈತಿಕತೆ ಇಟ್ಟುಕೊಂಡಿಲ್ಲ ಎಂದು ಸಚಿವ ಸುನಿಲ್'ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಡಿ.ಕೆ ಶಿವಕುಮಾರ ಮೊನ್ನೆ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ಇಡಿ ಕಚೇರಿಗೆ ವಿಚಾರಣೆಗೆ ಹೋಗಿದ್ದಾರೆ. ನಿನ್ನೆ ಪೇಸಿಎಂ ಅಂತ ಪೋಸ್ಟರ್ ಅಂಟಿಸುತ್ತಾರೆ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ? ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ ಅವರ ಕಾಲದಲ್ಲಿ ಅರ್ಕಾವತಿ ರೀಡೂ ಹಗರಣ, ಇಂದಿರಾ ಕ್ಯಾಂಟೀನ್ ಹಗರಣ ಮತ್ತು ಹಾಸಿಗೆ ತಲೆದಿಂಬು ಹಗರಣ ನಡೆದಿದೆ.
ಇವತ್ತು ನಮ್ಮ ಮೇಲೆ ಆಧಾರ ರಹಿತ ಆರೋಪ ಮಾಡುತ್ತಾರೆ. ನಮ್ಮ ಕಾಮನ್'ಮ್ಯಾನ್ ಸಿಎಂ ಬಗ್ಗೆ ಮಾತಾಡುತ್ತಾರೆ. ಇವರು ಲೋಕಾಯುಕ್ತಕ್ಕೆ ದೂರು ಕೊಡಲಿ, ಮತ್ತೆಲ್ಲಿಯಾದರೂ ದೂರು ಕೊಡಲಿ ಅದು ಬಿಟ್ಟು ಆಧಾರ ರಹಿತ ಆರೋಪ ಮಾಡೋದು ಬೇಡ ಎಂದು ಹೇಳಿದರು.
PublicNext
24/09/2022 11:29 am