ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಸ್ ಡಿಪಿಐ ಗೂಡಂಗಡಿ ಅಲ್ಲ: ಇದೊಂದು ನೋಂದಾಯಿತ ರಾಜಕೀಯ ಪಕ್ಷ: ಎಸ್ಡಿಪಿಐ

ಮಂಗಳೂರು: ಇಂದು ಮಂಗಳೂರಲ್ಲಿ ನಡೆದ ಪಿಎಫ್ ಐ ಕಚೇರಿ, ನಾಯಕರ ಮೇಲೆ ಎನ್‌ಐ ಎ ದಾಳಿ‌ಯನ್ನು ವಿರೋಧಿಸಿ ಮಂಗಳೂರಲ್ಲಿ ಸಂಜೆ ಎಸ್ ಡಿಪಿಐ, ಪಿಎಫ್ ಐ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಅಬೂಬಕ್ಕರ್ ಕುಳಾಯಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ನೀಡದೇ, ಸಮನ್ಸ್ ನೀಡದೇ ದಾಳಿ‌ ಮಾಡುತ್ತಿದ್ದಾರೆ. ಏಕಾಏಕಿ ನುಗ್ಗಿ ದಾಳಿ ನಡೆಸುತ್ತಿದ್ದಾರೆ. ನಿಮ್ಮನ್ನು ಜನರು ಒಂದು ದಿನ ಹಿಮ್ಮೆಟ್ಟಿಸುವ ಕಾಲ ಬರಲಿದೆ. ನಮ್ಮ ಕಚೇರಿಯಲ್ಲಿ ಕಳ್ಳಾಟ ನಡೆಯುತ್ತಿದ್ಯಾ..?ಎಂದ ಅವರು, ಶಾಸಕ, ಸಚಿವರ ಕಚೇರಿ ಮೇಲೆ ಎನ್‌ಐಎ ದಾಳಿ ನಡೆಸಲಿ. ನಮಗೆ ಕರೆ ಮಾಡಿ ಬೀಗ ತೆಗೆಯಲು ಹೇಳಬಹುದಿತ್ತಲ್ವಾ..? ರಾತ್ರಿ ಕಚೇರಿಯಲ್ಲಿ ಯಾರೂ ಇರಲಿಲ್ಲ. ಚುನಾವಣಾ ನೋಂದಣಿ ಮಾಡಿದ ಕಚೇರಿ ಮೇಲೆ ದಾಳಿ ಅಹಂಕಾರದ್ದು. ರಾಜಕೀಯ ಉದ್ದೇಶಕ್ಕಾಗಿ ದಾಳಿ‌ ನಡೆಸಲಾಗುತ್ತಿದೆ. ಪರಿಹಾರ ಕೊಡಲು ಇವರಲ್ಲಿ ಹಣ ಇಲ್ಲ. ಎಸ್ ಡಿಪಿಐ ಗೂಡಂಗಡಿ ಅಲ್ಲ, ಇದೊಂದು ನೋಂದಾಯಿತ ರಾಜಕೀಯ ಪಕ್ಷವಾಗಿದೆ. ನಾವು ಕಾನೂನು ಹೋರಾಟ ಮಾಡಿ ಗೆಲ್ಲುತ್ತೇವೆ. ನಮ್ಮನ್ನು ಅವರಿಗೆ ಸೈದ್ಧಾಂತಿಕವಾಗಿ ಎದುರಿಸಲು ಆಗುತ್ತಿಲ್ಲ. ಬಿಜೆಪಿ ವಿರುದ್ಧ ಅವ್ರ ಕಾರ್ಯಕರ್ತರೇ ಎದುರು ನಿಂತಿದ್ದಾರೆ ಅಂದ್ರು.

ರಾಜ್ಯದಲ್ಲಿ ಸುಮಾರು 21 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಲ್ಲಿ ಪಿಎಫ್ ಐನ ಆರು ಮಂದಿಯನ್ನು ಎನ್ ಐಎ ವಶಕ್ಕೆ ಪಡೆದಿದೆ ಎಂದರು.

Edited By : Nagesh Gaonkar
PublicNext

PublicNext

22/09/2022 06:35 pm

Cinque Terre

41.16 K

Cinque Terre

17

ಸಂಬಂಧಿತ ಸುದ್ದಿ