ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಧನ ಇಲಾಖೆಯಲ್ಲಿ ನಡೆದ ನೇಮಕಾತಿಗಳ ಬಗ್ಗೆ ತನಿಖೆಯಾಗಬೇಕು: ಮಂಜುನಾಥ ಪೂಜಾರಿ

ಹೆಬ್ರಿ: ಗೃಹ ಇಲಾಖೆಯ ಪಿ.ಎಸ್.ಐ ಹುದ್ದೆಗಳ ಅಕ್ರಮ ನೇಮಕಾತಿಯಂತೆ ಇಂಧನ ಇಲಾಖೆಯಲ್ಲಿ ನಡೆದ ನೇಮಕಾತಿಗಳ ಬಗ್ಗೆ ತನಿಖೆಯಾಗಬೇಕು. ಇದರ ಜವಾಬ್ದಾರಿ ಇಂಧನ ಸಚಿವ ಸುನಿಲ್ ಕುಮಾರ್ ಹೊರಬೇಕೆಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಎಲ್ಲಾ ಸರಕಾರಿ ಇಲಾಖೆಗಳ ಹುದ್ದೆಗಳನ್ನು ಮಾರಾಟ ಮಾಡುತ್ತಿರುವ ಮತ್ತು 40% ಹಾಗೂ 100% ಕಮೀಷನ್ ಈ ಭ್ರಷ್ಟ ಬಿಜೆಪಿ ಸರಕಾರ ಮತ್ತು ಇಂಧನ ಸಚಿವರು ರಾಜೀನಾಮೆ ನೀಡಬೇಕು ಎಂದು ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಆಗ್ರಹಿಸಿದ್ದಾರೆ.

ಅವರು ಸೋಮವಾರ ಹೆಬ್ರಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಬೊಮ್ಮಾಯಿ ಸರಕಾರದ ಸಚಿವರಾದ ಸುನಿಲ್ ಕುಮಾರ್, ಅರಗ ಜ್ಞಾನೇಂದ್ರ, ಡಾ. ಸುಧಾಕರ್, ಈಶ್ವರಪ್ಪ, ಸಿ.ಟಿ ರವಿ ಇವರನ್ನು ತನಿಖೆಗೆ ಒಳಪಡಿಸಬೇಕು. ಈಗ ಕಾಂಗ್ರೆಸ್ ಸರಕಾರದ ಬಗ್ಗೆ ಆರೋಪ ಮಾಡುತ್ತಿರುವ ಮುಖ್ಯಮಂತ್ರಿಗಳು ಮತ್ತು ಸುನಿಲ್ ಕುಮಾರ್ ಕಾಂಗ್ರೆಸ್ ಸರಕಾರವಿದ್ದಾಗ ಆಗ ವಿರೋಧ ಪಕ್ಷದಲ್ಲಿದ್ದಾಗ ಇವರು ಏನು ಮಾಡುತ್ತಿದ್ದರು ಜನರು ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕೊಡಲಿಲ್ಲ. ಈ ಬಾರಿ ಬಿಜೆಪಿಗೆ ನೀಡಿದ್ದಾರೆ.

ಇವರು ಅಧಿಕಾರಕ್ಕೆ ಬಂದ ತಕ್ಷಣವೆ ಈ ತನಿಖೆ ನಡೆಸಬೇಕಾಗಿತ್ತು. ಇವರ ಅಕ್ರಮಗಳು ರಾಜರೋಷವಾಗಿ ನಡೆಯುವಾಗ ಕಾಂಗ್ರೆಸ್ ಕಣ್ಣುಮುಚ್ಚಿ ಕೂರುವುದಿಲ್ಲ. ಇಂಧನ ಇಲಾಖೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡದೇ ಸರಕಾರಿ ಇಲಾಖೆಗಳಲ್ಲಿ ಎಲ್ಲರೂ ಹೊರ ಜಿಲ್ಲೆ ಮತ್ತು ಉತ್ತರ ಕರ್ನಾಟಕದವರು ಉದ್ಯೋಗ ಮಾಡುವಂತಾಗಿದೆ.

ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಪಡೆದು ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬಿಜೆಪಿ ಸರಕಾರದ ಮಂತ್ರಿಗಳು ಸರಕಾರಿ ಹುದ್ದೆಗಳ ದರ ಪಟ್ಟಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿಯೂ ಮೆಸ್ಕಾಂ ಇಲಾಖೆಯಲ್ಲಿ ಸುನಿಲ್ ಕುಮಾರ್‌ರವರ ಇಲಾಖೆಯಲ್ಲಿ ನೇಮಕಾತಿ ಉಡುಪಿ ಜಿಲ್ಲೆಯವರಿಗೆ ಕೊಡದೇ ಉತ್ತರ ಕರ್ನಾಟಕ ಭಾಗದವರಿಗೆ ಕೊಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಇಲ್ಲಿಯ ಯುವಕ ಯುವತಿಯರು 4-5ಸಾವಿರದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಬೇಕೇ? ಕಾರ್ಕಳ, ಉಡುಪಿ, ಮಂಗಳೂರಿನವರಿಗೆ ಯೋಗತ್ಯೆ ಇಲ್ಲವೆ ತಿಳಿಸಿ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಎಲ್ಲಾ ಅಕ್ರಮಗಳು ಕಮೀಷನ್ ದಂಧೆಗಳ ತನಿಖೆ ನಡೆಸಬೇಕು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ರಂಜಿನಿ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಜನಾರ್ಧನ, ಶಶಿಕಲಾ ಪೂಜಾರಿ, ಶೀನ ಪೂಜಾರಿ, ಕೃಷ್ಣ ನಾಯ್ಕ, ಸಂತೋಷ್ ನಾಯಕ್, ಎಚ್, ಬಿ, ಸುರೇಶ್, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/09/2022 08:21 pm

Cinque Terre

2.54 K

Cinque Terre

0