ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ದೇಶದಲ್ಲಿ ಇರುವದು ವಕ್ಫ್ ಬೋರ್ಡ್ ಅಲ್ಲ, ಬೋಗಸ್ ಬೋರ್ಡ್; ಮುತಾಲಿಕ್ ಆರೋಪ

ಪುತ್ತೂರು: ದೇಶದಲ್ಲಿ ಇರುವುದು ವಕ್ಫ್ ಬೋರ್ಡ್ ಅಲ್ಲ, ಬೋಗಸ್ ಬೋರ್ಡ್ ಎಂದು ಶ್ರೀರಾಮ ಸೇನೆಯ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಪುತ್ತೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ಬೋರ್ಡ್ ಡೇಂಜರ್ ಬೋರ್ಡ್. ಕೇಂದ್ರ ಸರಕಾರ ಇಡೀ ದೇಶದಲ್ಲಿ ವಕ್ಫ್ ಬೋರ್ಡ್‌ಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

PFI, SDPI ಬ್ಯಾನ್ ಕುರಿತು ಸರಕಾರ ಚಿಂತನೆ ನಡೆಸಿದ್ದು, ಸರಕಾರದ ಎರಡೂ ಸಂಘಟನೆಗಳನ್ನು ಶೀಘ್ರ ಬ್ಯಾನ್ ಮಾಡಬೇಕು. ಇಲ್ಲದಿದ್ದಲ್ಲಿ ಇಡೀ ರಾಜ್ಯದಲ್ಲಿ ಹಿಂದೂ ಸಂಘಟನೆಗಳಿಂದ ಬ್ಯಾನ್ ಆಂದೋಲನ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದರು, PFI, SDPIಯನ್ನು ತನ್ನ ರಾಜಕೀಯ ಲಾಭಕ್ಕೋಸ್ಕರ ಬಿಜೆಪಿ ಪ್ರೋತ್ಸಾಹಿಸುತ್ತಿದ್ದು, ನಿಜವಾಗಿ ಇದು ಕ್ಯಾನ್ಸರ್ ಅನ್ನು ಬೆಳೆಸುತ್ತಿದೆ. ತಕ್ಷಣ ಬ್ಯಾನ್ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ನುಂಗಿ ಹಾಕುವುದಂತೂ ಗ್ಯಾರಂಟಿ ಎಂದು ಅವರು ಹೇಳಿದರು.

ಹಿಂದುತ್ವದ ಧ್ವನಿಯಾಗಿ ನಿಲ್ಲಲು ಮುಂದಿನ ಚುನಾವಣೆಯಲ್ಲಿ 25 ಸೀಟುಗಳನ್ನು ಹಿಂದೂ ಕಾರ್ಯಕರ್ತರು, ಸಂಘಟನೆ ಮುಖಂಡರುಗಳಿಗೆ ನೀಡಬೇಕು. ಎಲ್ಲಿ ಬೇಕಾದರೂ ಆಗಬಹುದು ಎಂದು ಬಿಜೆಪಿ ಪಕ್ಷವನ್ನು ವಿನಂತಿಸಿ, ಹಿಂದುತ್ವ ವಿಚಾರದಲ್ಲಿ ಬಿಜೆಪಿ ಹಂತ ಹಂತವಾಗಿ ಸುಧಾರಿಸಿಕೊಳ್ಳುತ್ತಿದೆ. ಮುಂದಿನ ಆರು ತಿಂಗಳಲ್ಲಿ ಬಿಜೆಪಿಯಲ್ಲಿ ಬದಲಾವಣೆ ಆಗದಿದ್ದರೆ ಕಾಂಗ್ರೆಸ್-ಜೆಡಿಎಸ್‌ನಿಂದ ಹಿಂದೂ ಸಮಾಜಕ್ಕೆ ಆಗುವ ಅಘಾತಕ್ಕೆ ಬಿಜೆಪಿ ಪಕ್ಷ ಕಾರಣವಾಗುತ್ತದೆ ಎಂದು ತಿಳಿಸಿದರು.

Edited By : Nagesh Gaonkar
PublicNext

PublicNext

19/09/2022 06:03 pm

Cinque Terre

32.97 K

Cinque Terre

11

ಸಂಬಂಧಿತ ಸುದ್ದಿ