ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ತೂರು: ಅಕ್ರಮ ಮರಳು ಸಾಗಾಟದಿಂದ ಕೆಟ್ಟು ಹೋದ ರಸ್ತೆ; ನಾಗರಿಕರಿಂದ ಪ್ರತಿಭಟನೆ

ಮುಲ್ಕಿ: ಇಲ್ಲಿಗೆ ಸಮೀಪದ ಪಕ್ಷಿಕೆರೆಯಿಂದ ಸುರಗಿರಿ ರಸ್ತೆಯು ಅಕ್ರಮ ಮರಳು ಸಾಗಾಟದ ವಾಹನಗಳಿಂದ ತೀವ್ರ ಕೆಟ್ಟು ಹೋಗಿದ್ದು ಕೂಡಲೇ ಸರಿಪಡಿಸುವಂತೆ ಅತ್ತೂರು ಪಡ್ಪುವಿನಲ್ಲಿ ಅತ್ತೂರು ಹಾಗೂ ಕೆಮ್ರಾಲ್ ಗ್ರಾಮಸ್ಥರ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಸ್ಥಳೀಯರಾದ ಪ್ರಸನ್ನ ಶೆಟ್ಟಿ ಮಾತನಾಡಿ, ರಾತ್ರೋರಾತ್ರಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟದ ಲಾರಿಗಳು ಸಂಚರಿಸುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸುಸ್ಥಿತಿಯಲ್ಲಿದ್ದ ರಸ್ತೆ ಮರಳುಗಾರಿಕೆ ವಾಹನಗಳಿಂದ ತೀವ್ರ ಕೆಟ್ಟು ಹೋಗಿದ್ದು ಅನೇಕ ಅಪಘಾತಗಳು ಸಂಭವಿಸಿದೆ. ಈ ಬಗ್ಗೆ ಪಂಚಾಯಿತಿಗೆ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕ ಚರಣ್ ಶೆಟ್ಟಿ ಮಾತನಾಡಿ, ಸುರತ್ಕಲ್ ಪೊಲೀಸ್ ಠಾಣೆಯ ಗಡಿಭಾಗವಾದ ಶಿಬರೂರು ಕಡೆಯಿಂದ ಅಕ್ರಮ ಮರಳುಗಾರಿಕೆಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮುಂದಿನ 15 ದಿನಗಳ ಒಳಗಡೆ ರಸ್ತೆ ದುರಸ್ತಿ ಹಾಗೂ ಅಕ್ರಮ ಮರಳು ಸಾಗಾಟದ ವಾಹನಗಳನ್ನು ನಿಯಂತ್ರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಸ್ಥಳೀಯ ನಾಗರಿಕರು ಮರಳುಗಾರಿಕೆಯ ವಾಹನಗಳನ್ನು ನಿಯಂತ್ರಿಸುವಂತೆ ಪೊಲೀಸರಿಗೆ ಮನವಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಳಿಕ ಪಂಚಾಯತ್ ಅಧ್ಯಕ್ಷರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮಾತನಾಡಿ, ಅಕ್ರಮ ಮರಳುಗಾರಿಕೆ ವಾಹನಗಳು ಸಂಚರಿಸುವ ಬಗ್ಗೆ ಲಿಖಿತ ದೂರುಗಳು ಇದುವರೆಗೂ ಬಂದಿಲ್ಲ. ಮುಂದಕ್ಕೆ ಈ ಬಗ್ಗೆ ಗಣಿ ಇಲಾಖೆ, ಶಾಸಕರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದರು.

ಈ ನಡುವೆ ಅಕ್ರಮ ಮರಳುಗಾರಿಕೆಯಿಂದ ರಸ್ತೆ ಹಾಳಾಗಿದ್ದು, ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಹಿತಿ ತಿಳಿದ ದಂಧೆಕೋರರು ತಾತ್ಕಾಲಿಕ ನೆಲೆಯಲ್ಲಿ ಹೊಂಡ ರಸ್ತೆಗೆ ಭಾರೀ ಗಾತ್ರದ ಜಲ್ಲಿ ಹಾಕಿ ರಸ್ತೆ ಮತ್ತಷ್ಟು ಹದಗೆಡುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಹಿತಕರ ಘಟನೆಗಳು ನಡೆಯದಂತೆ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

18/09/2022 04:50 pm

Cinque Terre

10.23 K

Cinque Terre

3

ಸಂಬಂಧಿತ ಸುದ್ದಿ