ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ತೆರವಾದ ಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೆ.26ರಂದು ಚುನಾವಣೆ

ಕಾರ್ಕಳ: ಅವಿಶ್ವಾಸ ನಿರ್ಣಯದ ಮೂಲಕ ತೆರವಾಗಿದ್ದ ಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೆ 26ರಂದು ಚುನಾವಣೆ ನಿಗದಿಯಾಗಿದೆ. ಸೆ 1 ರಂದು ಅಂದಿನ ಅಧ್ಯಕ್ಷೆಯಾಗಿದ್ದ ಮಲ್ಲಿಕಾ ಶೆಟ್ಟಿಯವರನ್ನು ಅವರ ವಿರೊಧಿ ಬಣವು ಅವಿಶ್ವಾಸಮತದ ಮೂಲಕ ಪದಚ್ಯುತಗೊಳಿಸಿತ್ತು. ಆದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಸಲು ಚುನಾವಣಾಧಿಕಾರಿ ಈಶ್ವರ್ ನಾಯ್ಕ್ ದಿನಾಂಕ ಪ್ರಕಟಿಸಿದ್ದಾರೆ.

ಸೆ 26ರಂದು ಬೆಳಗ್ಗೆ 9ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಅಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ ಬಳಿಕ ನಾಮಪತ್ರಗಳ ಪರಿಶೀಲನೆಯ ನಂತರ 4 ಗಂಟೆಗೆ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

ಅವಿರೋಧ ಆಯ್ಕೆ ಬಹುತೇಕ ಖಚಿತ:

ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರೂ, ಬಹುತೇಕ ಅವಿರೋಧದ ಮೂಲಕವೇ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಯಾಕೆಂದರೆ 15 ಸದಸ್ಯಬಲದ ಪಂಚಾಯಿತಿಯಲ್ಲಿ 10 ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದ ಹಿನ್ನಲೆಯಲ್ಲಿ ಅವರ ಬಣದಿಂದಲೇ ಅವಿರೋಧವಾಗಿ ನೂತನ ಅಧ್ಯಕ್ಷರ ಆಯ್ಕೆ ಖಚಿತವಾಗಿದೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ವರ್ಗಕ್ಕೆ ಒಲಿದಿದ್ದು, ಮೂಲಗಳ ಪ್ರಕಾರ 5ನೇ ವಾರ್ಡಿನ ರಕ್ಷಿತಾ ಶೆಟ್ಟಿಯವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದ್ದು, ಇನ್ನುಳಿದಂತೆ ಮೂರು ಅವಧಿಗೆ ಸದಸ್ಯೆಯಾಗಿ 4ನೇ ವಾರ್ಡಿನಿಂದ ಆಯ್ಕೆಯಾದ ವಿಮಲಾ ಪೂಜಾರಿಯವರ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ಯಾರು ಅಂತಿಮವಾಗಿ ಅಧ್ಯಕ್ಷ ಸ್ಥಾನ ಅಂಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Edited By : PublicNext Desk
Kshetra Samachara

Kshetra Samachara

13/09/2022 12:20 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ