ಉಡುಪಿ : ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಉಡುಪಿಯಲ್ಲಿ ವ್ಯಂಗ್ಯವಾಡಿರುವ ಇಂಧನ ಸಚಿವ ಸುನಿಲ್ ಕುಮಾರ್
ದಕ್ಷಿಣದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದರೆ, ಉತ್ತರದಲ್ಲಿ ಕಾಂಗ್ರೆಸ್ ಚೋಡೋ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ದೇಶ ಮುರಿದವರು ಭಾರತ ಜೋಡೋ ಹೇಗೆ ಮಾಡುತ್ತಾರೆ ? ದೇಶ ಮುರಿದವರಿಗೆ ಭಾರತ್ ಜೋಡೋ ಮಾಡುವ ನೈತಿಕತೆ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ.
ದಕ್ಷಿಣದಲ್ಲಿ ಕಾಂಗ್ರೆಸ್ ಜೋಡೋ ನಡೆಯುತ್ತಿದ್ದರೆ... ಉತ್ತರದಲ್ಲಿ ಹಿರಿಯ ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ದಕ್ಷಿಣದವರು ಯಾತ್ರೆ ಮುಗಿಸಿ ಉತ್ತರ ತಲುಪುವಾಗ ಅಲ್ಲಿ ಕಾಂಗ್ರೆಸ್ ಇರುವುದಿಲ್ಲ ಎಂದ ಸಚಿವರು, ಕೊನೆಗೆ
ಒಬ್ಬರೇ ಏಕಾಂಗಿಯಾಗಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಬರಬಹುದು. ಮಧ್ಯಪ್ರದೇಶ ದಾಟುತ್ತಿದ್ದಂತೆ ವಿಚಿತ್ರ ಪರಿಸ್ಥಿತಿ ಎದುರಾಗಬಹುದು. ಪಾದಯಾತ್ರೆ ಮೊಟಕುಗೊಳಿಸಿ ಕಾಂಗ್ರೆಸ್ ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.
Kshetra Samachara
10/09/2022 04:31 pm