ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊನೆಗೂ ಉತ್ತರಕ್ಕೆ ದಕ್ಕಿದ ಮಂಗಳೂರು ಮೇಯರ್ ಗಿರಿ! ಜಯಾನಂದ ಅಂಚನ್ ಮೇಯರ್, ಪೂರ್ಣಿಮಾ ಉಪಮೇಯರ್!

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು ಮೇಯರ್ ಆಗಿ ಹಿರಿಯ ಕಾರ್ಪೋರೇಟರ್ ಜಯಾನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ನಿನ್ನೆ ತಡರಾತ್ರಿಯವರೆಗೆ ಮೇಯರ್ ಸ್ಥಾನ ಆಕಾಂಕ್ಷಿಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು ಅಂತಿಮವಾಗಿ ಮಂಗಳೂರು ಉತ್ತರಕ್ಕೆ ಸ್ಥಾನಮಾನ ನೀಡಬೇಕು ಮತ್ತು ಈ ಬಾರಿಯಾದರೂ ಬಿಲ್ಲವ ಸಮುದಾಯಕ್ಕೂ ಮಣೆ ನೀಡಬೇಕು ಎಂಬ ಪ್ರಬಲ ಆಗ್ರಹಕ್ಕೆ ಮಣಿದು ಜಯಾನಂದ ಅಂಚನ್ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.

ಮೇಯರ್ ಕುರ್ಚಿ ಮೇಲೆ ಕಣ್ಣು ಹಾಕಿದ್ದ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಈ ಹಿಂದೆ ತನ್ನ ಬರ್ತ್ ಡೇ ಹೆಸರಲ್ಲಿ ಪಾಲಿಕೆ ಸದಸ್ಯರಿಗೆ "ಬಾಡೂಟ" ಏರ್ಪಡಿಸಿ ಸುದ್ದಿಯಾಗಿದ್ದರು. ಸುಧೀರ್ ಶೆಟ್ಟಿ ಅವರ ಬಗ್ಗೆ ಪಾಲಿಕೆ ಸದಸ್ಯರಲ್ಲೇ ಅಸಮಾಧಾನ ಏರ್ಪಟ್ಟಿತ್ತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸ್ಮಾರ್ಟ್ ಸಿಟಿ ನಿರ್ದೇಶಕರಾಗಿ ಮತ್ತು ಮನಪಾ ಮುಖ್ಯ ಸಚೇತಕರಾಗಿ ಈಗಾಗಲೇ ಸ್ಥಾನಮಾನ ಪಡೆದಿದ್ದರು. ಹೀಗಿರುವಾಗ ಮತ್ತೆ ಮೇಯರ್ ಗಿರಿಯೂ ಅವರಿಗೇ ಸಿಗುವುದಾದರೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇಲ್ಲವೇ ಎಂದು ಚರ್ಚೆ ಆರಂಭವಾಗಿತ್ತು.

ಪಾಲಿಕೆ ಮೇಯರ್ ಆಯ್ಕೆಯಲ್ಲಿ ಬಿಲ್ಲವ ಸಮುದಾಯಕ್ಕೆ ನ್ಯಾಯ ಸಿಗಬೇಕಿದ್ದು ಇದರ ಮಧ್ಯೆ ಮತ್ತೊಮ್ಮೆ ಬಂಟ ಸಮುದಾಯದ ನಾಯಕನಿಗೆ ಪಾಲಿಕೆ ಪಟ್ಟ ಕಟ್ಟಲು ತೆರೆಮರೆಯಲ್ಲಿ ಸಿದ್ಧತೆ ನಡೆದಿರುವುದು ಬಿಲ್ಲವ ಕಾರ್ಪೋರೇಟರ್ ಗಳ ಕಣ್ಣು ಕೆಂಪಗಾಗಿಸಿತ್ತು. ಪಾಲಿಕೆ ಆಡಳಿತ ಚುಕ್ಕಾಣಿ ಬಿಜೆಪಿಗೆ ಸಿಕ್ಕಿದ ಬಳಿಕ ಮೊದಲನೇ ಅವಧಿಗೆ ದಿವಾಕರ ಪಾಂಡೇಶ್ವರ ಅವರು ಮೇಯರ್ ಆದರು. 2ನೇ ಅವಧಿಗೆ ಬಂಟ ಸಮುದಾಯದ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿದ್ದರು. ಆರಂಭದ ಎರಡೂ ವರ್ಷಗಳು ಮೇಯರ್ ಸ್ಥಾನಗಳು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಾದರೆ ಈ ಬಾರಿ ಮೇಯರ್ ಸ್ಥಾನ ಅರ್ಹವಾಗಿಯೇ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಿಗಬೇಕಿತ್ತು. ಪಕ್ಷದ ಹಿರಿಯ ನಾಯಕ, ಜನಸಾಮಾನ್ಯರೊಂದಿಗೆ ಬೆರೆಯುವ ವ್ಯಕ್ತಿತ್ವದ ಜಯಾನಂದರ ಆಯ್ಕೆಗೆ ಉತ್ತರ ಭಾಗದ ಕಾರ್ಪೋರೇಟರ್ ಗಳು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

09/09/2022 11:50 am

Cinque Terre

4.72 K

Cinque Terre

2

ಸಂಬಂಧಿತ ಸುದ್ದಿ