ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಡಬಲ್ ಎಂಜಿನ್ ಸರಕಾರ ದಕ್ಷಿಣ‌ ಕನ್ನಡ ಜಿಲ್ಲೆಗೆ ಏನು ನೀಡಿದೆ?-ಸುಧೀರ್ ಕುಮಾರ್ ಆಗ್ರಹ

ಸುಳ್ಯ:ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಈ ಡಬಲ್ ಎಂಜಿನ್ ಸರಕಾರ ಏನು ಕೊಡುಗೆ ನೀಡಿದೆ ಎಂಬುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ, ಏನು ಯೋಜನೆ ಹಾಕಿದ್ದಾರೆ ಎಂಬುದನ್ನು ಘೋಷಣೆ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ದೇಶದ ಅಧಿಕಾರ ನಡೆಸುವವರಿಗೆ ಸಂವಿಧಾನವೇ ಪರಮ ಶ್ರೇಷ್ಠವಾಗಬೇಕು. ಸಂವಿಧಾನದ ಅನುಷ್ಠಾನಕ್ಕೆ ಪರಮ‌ ಪ್ರಾಧಾನ್ಯ ನೀಡಬೇಕು. ಕಾಂಗ್ರೆಸ್ ನೇತೃತ್ವದಲ್ಲಿ ಚಳುವಳಿ ನಡೆಸಿ ಸ್ವಾತಂತ್ರ್ಯ ಗಳಿಸಿ, ಆ ಸ್ವಾತಂತ್ಯ ಎಲ್ಲರಿಗೂ ದೊರೆಯಬೇಕು ಎಂಬ ನೆಲೆಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವವನ್ನೂ, ಸಂವಿಧಾನವನ್ನೂ ಜಾರಿ ಮಾಡಲಾಗಿದೆ. ನಮ್ಮ ಸ್ವಾತಂತ್ರ್ಯವನ್ನು ಉಳಿಸಬೇಕಾದ, ಸಂವಿಧಾನವನ್ನು ಉಳಿಸಬೇಕಾದ ಅನಿವಾರ್ಯತೆ ಇಂದು ಇದೆ ಎಂದು ಅವರು ಹೇಳಿದರು.

ಜಾಲ್ಸೂರಿನಿಂದ ಆರಂಭಗೊಂಡ ಪಾದಯಾತ್ರೆ ಸುಳ್ಯದಲ್ಲಿ ಸಮಾಪನಗೊಂಡಿತು. ಹಿರಿಯರಾದ ಕೇಪು ಸುಂದರ‌ ಮಾಸ್ತರ್, ಹಾಜಿ ಇಸಾಕ್ ಸಾಹೇಬ್ ಹಾಗು ಮಾರ್ಟಿನ್ ಕ್ರಾಸ್ತಾ ಅವರು ತ್ರಿವರ್ಣ ಬಲೂನ್ ಹಾರಿ ಬಿಡುವುದರ ಮೂಲಕ ಚಾಲನೆ ನೀಡಿದರು‌. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ, ಹೆಚ್.ಎಂ.ನಂದಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

31/08/2022 09:55 am

Cinque Terre

14.57 K

Cinque Terre

6

ಸಂಬಂಧಿತ ಸುದ್ದಿ