ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ ನ್ಯೂಸ್: ಉಡುಪಿಯಲ್ಲಿ ಸಾವರ್ಕರ್ ವೃತ್ತ ನಿರ್ಮಾಣ; ನಗರಸಭೆ ಮೀಟಿಂಗ್‌ನಲ್ಲಿ ಮಹತ್ವದ ನಿರ್ಣಯ

ಉಡುಪಿ: ಇಂದು ನಡೆದ ಉಡುಪಿ ನಗರಸಭೆಯ ಅಧಿವೇಶನದಲ್ಲಿ ಸಾವರ್ಕರ್ ವೃತ್ತ ನಿರ್ಮಾಣ ಮಾಡುವ ಸರ್ವಾನುಮತದ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಯಾವುದೇ ವಿರೋಧ ಇಲ್ಲದೆ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಅದರಂತೆ ಜಿಲ್ಲಾ ನ್ಯಾಯಾಲಯದ ಬಳಿ ಸಾವರ್ಕರ್ ಸರ್ಕಲ್ ನಿರ್ಮಾಣ ಮಾಡಲಾಗುತ್ತದೆ. ಸಾವರ್ಕರ್ ಪ್ರತಿಮೆಗೆ ಬದಲಾಗಿ ಸರ್ಕಲ್ ನಿರ್ಮಿಸಲು ನಿರ್ಧಾರ ಮಾಡಲಾಯಿತು. ಉಡುಪಿ ಶಾಸಕರ ಪ್ರಸ್ತಾವನೆಗೆ ಬಿಜೆಪಿ, ಕಾಂಗ್ರೆಸ್ ಸದಸ್ಯರು ಒಪ್ಪಿಗೆ ಸೂಚಿಸಿದರು.

ಈ ಹಿಂದೆ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯ ಕೇಳಿಬಂದಿತ್ತು. ಬ್ರಹ್ಮಗಿರಿ ಸರ್ಕಲ್‌ಗೆ ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ನಾಮಕರಣ ಮಾಡಿ ಈ ಮೊದಲೇ ನಿರ್ಣಯಿಸಲಾಗಿತ್ತು. ಆದ್ದರಿಂದ ಬೇರೆ ಕಡೆ ಅತಿ ಶೀಘ್ರ ಸಾವರ್ಕರ್ ವೃತ್ತ ನಿರ್ಮಿಸುವ ನಿರ್ಣಯ ಅಂಗೀಕಾರ ಮಾಡಲಾಗಿದ್ದು, ಪ್ರತಿಮೆ ಪ್ರಸ್ತಾಪ ಸದ್ಯ ಕೈಬಿಡಲಾಗಿದೆ.

Edited By : Manjunath H D
PublicNext

PublicNext

30/08/2022 02:56 pm

Cinque Terre

37.81 K

Cinque Terre

5

ಸಂಬಂಧಿತ ಸುದ್ದಿ