ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಆ.29ರಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಆಗಮನ; ಭವ್ಯ ಸ್ವಾಗತಕ್ಕೆ ಸಚಿವ ಅಂಗಾರ ಕರೆ

ಸುಳ್ಯ: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಿರುವ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಆ.29ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದೆ.

ಈ‌ ಸಂದರ್ಭ ಸುಳ್ಯ ತಾಲೂಕಿನಲ್ಲಿ ಸಾರ್ವಜನಿಕರು ಅದ್ಧೂರಿ ಸ್ವಾಗತ ನೀಡಿ ಬರ ಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವ ಎಸ್.ಅಂಗಾರ ವಿನಂತಿಸಿದ್ದಾರೆ.

ಮಂಗಳೂರಿನ ಬಾವುಟಗುಡ್ಡೆಯಲ್ಲಿಈಗಾಗಲೇ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪಿಸಲು ಸಿದ್ಧತೆ ಪೂರ್ಣಗೊಂಡಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರತಿಮೆ ತಯಾರಾಗಿದ್ದು, ಆ.29ರಂದು ಬೆಳಗ್ಗೆ 9ಕ್ಕೆ ಸಂಪಾಜೆ ಗೇಟಿನ ಬಳಿ ಆಗಮಿಸಲಿದೆ.ಅಲ್ಲಿಂದ ಸುಳ್ಯ ನಗರ‌ ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಪ್ರತಿಮೆಗೆ ಸ್ವಾಗತ ನೀಡಲಾಗುವುದು.

ರೈತರ ಸೇನೆ ಕಟ್ಟಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕೆದಂಬಾಡಿ ರಾಮಯ್ಯ ಗೌಡರು ಸುಳ್ಯ ತಾಲೂಕಿನವರು ಎಂಬ ಹೆಮ್ಮೆ ನಮ್ಮದು. ಸಂಪಾಜೆ, ಅರಂತೋಡು, ಪೆರಾಜೆ, ಪೈಚಾರ್, ಜಾಲ್ಸೂರು, ಕನಕಮಜಲು ಮಾರ್ಗದ ಮೂಲಕ ಪ್ರತಿಮೆ‌ಯ ಮೆರವಣಿಗೆ ಸಾಗುವ ವೇಳೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಗತ ನೀಡಬೇಕು ಎಂದು ಅಂಗಾರ ಕೋರಿದ್ದಾರೆ.

Edited By : Manjunath H D
Kshetra Samachara

Kshetra Samachara

28/08/2022 08:47 am

Cinque Terre

3.18 K

Cinque Terre

0

ಸಂಬಂಧಿತ ಸುದ್ದಿ