ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಾಲೂಕು ಆಡಳಿತ ಸೌಧ ನಾಳೆ ಶಿಲಾನ್ಯಾಸ; ಶಾಸಕರಿಂದ ಸ್ಥಳ ಪರಿಶೀಲನೆ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಗೇರುಕಟ್ಟೆ ಬಳಿ ಸುಮಾರು 10 ಕೋಟಿ ವೆಚ್ಚದ ಮುಲ್ಕಿ ತಾಲೂಕು ಆಡಳಿತ ಸೌಧ ಆಗಸ್ಟ್ 27 ಶನಿವಾರ (ನಾಳೆ) ಶಿಲಾನ್ಯಾಸ ನಡೆಯಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ಸಿದ್ಧತಾ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.

ನೂತನವಾಗಿ ನಿರ್ಮಾಣಗೊಳ್ಳಲಿರುವ ಆಡಳಿತ ಸೌಧದಲ್ಲಿ 27 ವಿವಿಧ ಇಲಾಖೆಯ ಸರಕಾರಿ ಕಚೇರಿಗಳು ಒಳಗೊಂಡಿದ್ದು ಕರ್ನಾಟಕ ರಾಜ್ಯದ ವಸತಿ ಸಚಿವ ಸೋಮಣ್ಣ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅದೇ ರೀತಿ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ರವರು ಮುಲ್ಕಿಯ ಕಾರ್ನಾಡ್ ಬೈಪಾಸ್ ಬಳಿ 3 ಕೋಟಿ ವೆಚ್ಚದ ಪ್ರವಾಸಿ ಮಂದಿರ, ಮೂಡಬಿದ್ರೆಯಲ್ಲಿ ನಾಲ್ಕು ಕೋಟಿ ವೆಚ್ಚದ ಪ್ರವಾಸಿ ಮಂದಿರ ಹಾಗೂ 5 ಕೋಟಿ ವೆಚ್ಚದ ಚತುಷ್ಪಥ ರಸ್ತೆಗೆ ಶಿಲನ್ಯಾಸ ನೆರವೇರಿಸಲಿದ್ದಾರೆ.

ಶಾಸಕರ ಜೊತೆ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಬಿಜೆಪಿ ನಾಯಕರಾದ ರಂಗನಾಥ ಶೆಟ್ಟಿ, ವಿನೋದ್ ಸಾಲ್ಯಾನ್, ವಿಠ್ಠಲ್ ಎನ್ ಎಂ, ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

Edited By :
Kshetra Samachara

Kshetra Samachara

26/08/2022 01:28 pm

Cinque Terre

10.61 K

Cinque Terre

0