ಉಡುಪಿ: ಕನ್ನಡ ಸಂಸ್ಕೃತಿ ಇಲಾಖೆ ಟ್ರಸ್ಟ್ ಗಳ ಸದಸ್ಯರ ನೇಮಕಾತಿಯಲ್ಲಿ ಅಚಾತುರ್ಯ ವಿಚಾರವಾಗಿ ಉಡುಪಿಯಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವೇ ವ್ಯಕ್ತಿಗಳಿಗೆ, ತಂಡಕ್ಕೆ ಸೀಮಿತವಾಗಿದ್ದ ಟ್ರಸ್ಟ್ ಗಳ ಪುನರ್ ರಚನೆ ಮಾಡಿದ್ದೇವೆ.ಟ್ರಸ್ಟ್ ಗಳು ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು.ಡಿಸೆಂಬರ್ ನಲ್ಲಿಯೇ ಈ ಪಟ್ಟಿ ಮಾಡಲಾಗಿತ್ತು, ನಿನ್ನೆ ಸರಕಾರ ಅನುಮೋದನೆ ಕೊಟ್ಟಿತ್ತು.
ಮರಣ ಹೊಂದಿದ ಇಬ್ಬರ ಹೆಸರು ಪಟ್ಟಿಯಲ್ಲಿ ಸೇರಿ ಸಣ್ಣ ಪ್ರಮಾದವಾಗಿತ್ತು.ಈ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಪಟ್ಟಿ ಸರಿಪಡಿಸುವ ಉದ್ದೇಶದಿಂದ ಆದೇಶ ಹಿಂಪಡೆದಿದ್ದೇವೆ ಎಂದ ಸಚಿವರು, ಸೋಮವಾರದೊಳಗೆ ಎರಡು ಮೂರು ಜನರ ಹೆಸರು ಸೇರಿಸಿಕೊಂಡು ಎಲ್ಲ ಟ್ರಸ್ಟ್ ಗಳ ಪುನರ್ ರಚನೆಯಾಗುತ್ತೆ.
ಇಷ್ಟು ವರ್ಷಗಳ ಕಾಲ ರಾಜ್ಯದ ಯಾವುದೇ ಟ್ರಸ್ಟ್ ಗಳ ಪುನರ್ ರಚನೆ ಆಗಿರಲಿಲ್ಲ.ಕೆಲವು ಕುಟುಂಬ, ವ್ಯಕ್ತಿಗಳಿಗೆ ,ತಂಡಗಳಿಗೆ ಟ್ರಸ್ಟ್ ಸೀಮಿತವಾಗಿತ್ತು.ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು, ಹೊಸ ಆಲೋಚನೆಗಳಿಗೆ ಅವಕಾಶ ನೀಡಬೇಕು .ಹೊಸಬರು ಬಂದಾಗ ಹೊಸತನ ಬರುತ್ತೆ. ಈ ಕಾರಣಕ್ಕೆ ಟ್ರಸ್ಟ್ ಪುನರ್ ರಚನೆಯಾಗಿದೆ.
ಯಾರಿಗೆ ಟ್ರಸ್ಟ್ ನಲ್ಲಿ ಇರಲು ಆಸಕ್ತಿ ಇಲ್ಲವೋ ಅವರನ್ನು ಕೈ ಬಿಡಲಾಗುವುದು ಎಂದು ಹೇಳಿದ್ದಾರೆ.
PublicNext
25/08/2022 11:06 pm