ಮಂಗಳೂರು: ಮೊಟ್ಟೆ, ಶಾಲೆಯ ಮಕ್ಕಳ ಊಟದ ಮೂಲಕ ಹಣ ಮಾಡಿದವರು ಇನ್ನೊಂದು ಸರಕಾರವನ್ನು 40% ಸರಕಾರವೆಂದು ಹೇಗೆ ಹೇಳುತ್ತಾರೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದರು.
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ನಗರದ ಜಿ.ಪಂ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ, ಬಳಿಕ ಮಾತನಾಡಿದ ಅವರು 40% ಕಮಿಷನರ್ ವಿಚಾರದಲ್ಲಿ ಸಾಕ್ಷಿಗಳು ಏನಿದೆ? ಇದ್ದರೆ ಕೊಡಲಿ. ಜಯಮಾಲಾ ಅವರು ಕಾಂಗ್ರೆಸ್‌ಗೆ ಹಣ ಕೊಡಲು ಮೊಟ್ಟೆಯಲ್ಲಿ ಹಣ ಮಾಡಿದವರು. ಅದರ ದಾಖಲೆ ನಮ್ಮಲ್ಲಿದೆ. ಕಾಂಗ್ರೆಸ್ ಪಕ್ಷ 80% ಸರಕಾರ. ಅವರು ನೆರೆ ಸಂಗ್ರಹದ ಹಣವನ್ನೇ ಲೂಟಿ ಮಾಡಿದವರು. ಕಾಂಗ್ರೆಸ್ ನವರಿಗೆ ನೈತಿಕತೆ ಇದ್ರೆ ಸಾಕ್ಷಿ ಕೊಡಲಿ. ಕೆಂಪಣ್ಣ ಸುಮ್ಮನೆ ಮಾತನಾಡುವ ಬದಲು ಪುರಾವೆ ಕೊಡಲಿ ಎಂದರು.
ಮಾಜಿ ಸಚಿವ ಈಶ್ವರಪ್ಪರಿಗೆ ಬೆದರಿಕೆ ಪತ್ರ ವಿಚಾರದಲ್ಲಿ ಸರ್ಕಾರ ಅವರಿಗೆ ಭದ್ರತೆ ಕೊಡುತ್ತದೆ. ಈದ್ಗಾ ಮೈದಾನ ಸರ್ಕಾರಿ ಸ್ಥಳ. ಅಲ್ಲಿ ಗಣೇಶ ಪ್ರತಿಮೆ ಇಡಬಹುದು. ಸ್ಥಳೀಯಾಡಳಿತಕ್ಕೆ ಅರ್ಜಿ ಕೊಟ್ಟಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಲಾಗುತ್ತದೆ. ಸರ್ಕಾರಿ ಜಾಗದಲ್ಲಿ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇ ಬೇಕು ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
PublicNext
25/08/2022 04:44 pm