ಮಂಗಳೂರು: ಸಾವರ್ಕರ್ ಫೋಟೊವನ್ನು ಮುಸ್ಲಿಮರ ಏರಿಯಾಗಳಲ್ಲಿ ಹಾಕಬಾರದೆಂದು ದಾಷ್ಟ್ಯತನದಿಂದ ಹೇಳಲಾಗುತ್ತಿದೆ. ಆದ್ದರಿಂದ ಯಾರಾದರೂ ಸಾವರ್ಕರ್ ವಿರುದ್ಧ ಮಾತನಾಡಿದಾಗಲೆಲ್ಲಾ ಅವರ ಜೀವನವನ್ನು ಮನೆ ಮನೆಗೆ ತಲುಪಿಸುತ್ತೇವೆ ಸಂಕಲ್ಪ ಕೈಗೊಳ್ಳಬೇಕಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ಮಂಗಳೂರಿನ ಡೊಂಗರಕೇರಿಯಲ್ಲಿ ಸಾವರ್ಕರ್ ನಿಂದನೆ ಹಿನ್ನೆಲೆಯಲ್ಲಿ 'ದೇಶಭಕ್ತನ ನಿಂದನೆ ಇನ್ನಷ್ಟು ದಿನ ಸಹಿಸೋದು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಈ ಬಾರಿಯ ಚೌತಿ ಸಾವರ್ಕರ್ ಚೌತಿಯಗಲಿ. ಎಲ್ಲಾ ಪೆಂಡಾಲ್ ಗಳಲ್ಲೂ ಅಲ್ಲೆಲ್ಲಾ ಸಾವರ್ಕರ್ ಫೋಟೋ ರಾರಾಜಿಸಲಿ. ಯಾವನು ಬಂದು ತಡಿಯುತ್ತಾನೋ ನೋಡೇ ಬಿಡೋಣ ಎಂದು ಸವಾಲೆಸೆದರು.
ಎಒ ಹ್ಯೂಮ್ ಎಂಬ ಬ್ರಿಟಿಷ್ ಅಧಿಕಾರಿ ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡಿಪಾಯ ಹಾಕಿದ್ದ. ಈತ ಸ್ವಾತಂತ್ರ್ಯ ಹೋರಾಟವನ್ನು ಒಂದೇ ಮುಖವಾಣಿಯಡಿಗೆ ತರಲೆಂದು ಕಾಂಗ್ರೆಸ್ ಸ್ಥಾಪನೆ ಮಾಡಿದ್ದ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸ್ಥಾಪನೆ ಮಾಡಿರುವ ಕಾಂಗ್ರೆಸ್ ಬೇರೆ, ಸ್ವಾತಂತ್ರ್ಯ ಹೋರಾಟದ ಸಂದರ್ಭವೇ ಇದ್ದ ಕಾಂಗ್ರೆಸ್ ಬೇರೆ. ಆದರೆ ಈಗಿನ ಕಾಂಗ್ರೆಸ್ಸಿಗರು ಎರಡೂ ಕಾಂಗ್ರೆಸ್ ಒಂದೇ ಎಂದು ಹೇಳಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
PublicNext
23/08/2022 10:55 pm