ಕಾರ್ಕಳ: ರಾಜ್ಯ ಮಲೆಕುಡಿಯ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಧರ್ ಗೌಡ ಈದು ಆಯ್ಕೆಯಾಗಿದ್ದಾರೆ. ಆಗಸ್ಟ್ 21ರಂದು ಬೆಳ್ತಂಗಡಿಯ ಕೊಯ್ಯೂರಿನಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಮಲೆಕುಡಿಯ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಾಜ್ಯಾಧ್ಯಕ್ಷರಾದ ಅಣ್ಣಪ್ಪ ಎನ್. ಮಲೆಕುಡಿಯ ಸಮುದಾಯವು ಸಂಘಟನೆ ಮೂಲಕ ಒಗ್ಗಟ್ಟಾಗಬೇಕು. ನಮ್ಮ ಸಮುದಾಯ ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು ಈ ಬಗ್ಗೆ ಸಂಘಟನೆಗಳು ನಿರಂತರವಾಗಿ ಪ್ರಯತ್ನ ಮಾಡಬೇಕು. ನೂತನ ರಾಜ್ಯ ಸಮಿತಿಯೊಂದಿಗೆ ಎಲ್ಲರೂ ಸಹಕರಿಸಬೇಕೆಂದರು.
ನೂತನ ಅಧ್ಯಕ್ಷರಾಗಿ ಶ್ರೀಧರ್ ಗೌಡ ಈದು, ಉಪಾಧ್ಯಕ್ಷರುಗಳಾಗಿ ವೆಂಕಟೇಶ್ ಬೆಂಗಳೂರು, ಹಾಗೂ ವಸಂತಿ ಕುತ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೆ. ಪೊಳಲಿ, ಸಹಕಾರ್ಯದರ್ಶಿಯಾಗಿ ಜಯರಾಮ್ ಅಲಂಗಾರು, ಕೋಶಾಧಿಕಾರಿಯಾಗಿ ಶಿವರಾಮ್ ಉಜಿರೆ, ಸಂಘಟನಾ ಕಾರ್ಯದರ್ಶಿಯಾಗಿ ನೋಣಯ್ಯ ರೆಂಜಾಳ, ಸಹ ಸಂಘಟನಾ ಕಾರ್ಯದರ್ಶಿಯಾಗಿ ರಂಜಿತ್ ಚಿಕ್ಕಮಗಳೂರು, ಕೊಡಗು ಜಿಲ್ಲಾ ಸಂಚಾಲಕರಾಗಿ ಗಣೇಶ್ ಜೋಡುಪಲ್ಲ ಆಯ್ಕೆಯಾಗಿದ್ದಾರೆ.
Kshetra Samachara
23/08/2022 11:12 am