ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಯನ್ನು ಎಸ್ಡಿಪಿಐ ಖಂಡಿಸುತ್ತದೆ ಎಂದು
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಎಸ್ ಡಿಪಿಐ ಪಕ್ಷದಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರವೀಣ್ ಹತ್ಯೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಎನ್ಐಎಗೆ ನೀಡ್ತಾರೆ. ಅದೇ ಮಸೂದ್ ಹತ್ಯೆಯಲ್ಲಿ ಇಷ್ಟು ಕಾಳಜಿ ಯಾಕಿಲ್ಲ? ಜಿಲ್ಲೆಯಲ್ಲಿ ಯಾವುದೇ ಕೃತ್ಯ ನಡೆದರೂ ಬಿಜೆಪಿಗರ ಬಾಯಲ್ಲಿ ಬರೋ ಹೆಸರೇ ಎಸ್ಡಿಪಿಐ.
ಪ್ರವೀಣ್ ಹತ್ಯೆ ಆರೋಪಿಗಳು ಸ್ಥಳೀಯರೇ ಆಗಿದ್ದಾರೆ. ಆದ್ರೆ, ಫಾಝಿಲ್ ಹತ್ಯೆ ಆರೋಪಿಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶದವರು.
ಎಲ್ಲಿ ಸಂಘಟಿತವಾಗಿ ಹತ್ಯೆ ನಡೆದಿದೆ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಲಿ ಎಂದರು.
Kshetra Samachara
13/08/2022 10:17 pm