ಬೈಂದೂರು: ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಶಿರೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಮೀನುಗಾರಿಕಾ ದೋಣಿಗಳ ಹಾನಿಯ ಪರಿಶೀಲನೆ ನಡೆಸಿದರು. ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಜೊತೆಗೆ ಇಲ್ಲಿಗಾಗಮಿಸಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮೀನುಗಾರರು ಸಚಿವರ ಜೊತೆ ತಮಗಾದ ಸಮಸ್ಯೆಗಳನ್ನು ತೋಡಿಕೊಂಡರು. ಈ ಭಾಗದಲ್ಲಿ ಒಂದೇ ದಿನದ ಭಾರೀ ಗಾಳಿಮಳೆಗೆ 35 ಕ್ಕೂ ಹೆಚ್ಚು ಮೀನುಗಾರಿಕೆ ದೋಣಿಗಳು ನೀರಲ್ಲಿ ಕೊಚ್ಚಿ ಹೋಗಿ ಹಾನಿಗೊಳಗಾಗಿದ್ದವು. ಇದರಿಂದ ಸುಮಾರು ನಾಲ್ಕು ಕೋಟಿಯಷ್ಟು ನಷ್ಟ ಸಂಭವಿಸಿದೆ. ಬಂದರು ಮತ್ತು ಮೀನುಗಾರಿಕೆ ಸಚಿವರೂ ಆದ ಎಸ್ ಅಂಗಾರ, ಮೀನುಗಾರರಿಗಾದ ನಷ್ಟಕ್ಕೆ ಪರಿಹಾರ ಕೊಡುವ ಭರವಸೆ ನೀಡಿದರು.
Kshetra Samachara
10/08/2022 11:08 am