ಕುಂದಾಪುರ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಉಡುಪಿ ಜಿಲ್ಲೆಗೆ ನೂತನವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ರಚನೆಯಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಕುಂದಾಪುರದ ವಂಡ್ಸೆಯ ಸಿ.ಎಚ್. ಅಬ್ದುಲ್ ಮುತಾಲ್ಲಿ ಅವರನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷರೊಂದಿಗೆ ಎಂಟು ಉಪಾಧ್ಯಕ್ಷರುಗಳು ಮತ್ತು 12 ಸದಸ್ಯರುಗಳ ಸಲಹಾ ಸಮಿತಿಯನ್ನು ರಚಿಸಲಾಗಿದೆ. ನೂತನ ಅಧ್ಯಕ್ಷರು ಆ.2ರಂದು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಅಬ್ದುಲ್ ಮುತಾಲ್ಲಿ ಉದ್ಯಮಿಯಾಗಿದ್ದು, ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಘಟಕದ ಮುಖಂಡರಾಗಿದ್ದಾರೆ. ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರುಗಳಾದ ಮುಹಮ್ಮದ್ ಅಬ್ದುಲ್ ಸುಬ್ಲಾನ್, ಬದ್ರುದ್ದೀನ್ ತೌಫೀಖ್, ಅಬ್ದುಲ್ ರಹ್ಮಾನ್ ರ ಕಲ್ಕಟ್ಟ, ಅಪ್ಸರ್ ಉಚ್ಚಿಲ, ಸದಸ್ಯರುಗಳಾದ ಶೇಖ್ ಆಸೀಫ್ ಕಟಪಾಡಿ, ಜುನೈದ್ ಉಡುಪಿ, ಆದಮ್ ಸಾಹೇಬ್, ಅಬೂಬಕ್ಕರ್ ಹಸನಾರ್, ಸುಬ್ಲಾನ್ ಹೊನ್ನಾಳ, ಅಬ್ದುಲ್ಲಾ ಹಾಗೂ ಜಿಲ್ಲಾ ವಕ್ಸ್ ಅಧಿಕಾರಿ ಎಂ.ಅಬೂಬಕ್ಕರ್ ಉಪಸ್ಥಿತರಿದ್ದರು.
Kshetra Samachara
09/08/2022 09:59 am