ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: 'ಹರ್ ಘರ್ ತಿರಂಗ ಘೋಷಿಸಲು ಬಿಜೆಪಿಗೆ ನೈತಿಕತೆ ಇಲ್ಲ': ಸೊರಕೆ ಟೀಕೆ

ಕೋಟ: ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವಕ್ಕಿಂತ ನಾತುರಾಮ್ ಗೋಡ್ಸೆ ವ್ಯಕ್ತಿತ್ವ ಮೇಲು ಎನ್ನುವ ಜನ ಇವತ್ತು ಹರ್ ಘರ್ ತಿರಂಗ ಅಭಿಯಾನಕ್ಕೆ ಹೊರಟಿದ್ದು ದುರಂತ. ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಬ್ರಿಟಿಷರಿಗೆ ಕ್ಷಮೆಯಾಚನೆ ಬರೆದುಕೊಟ್ಟ ಸಾವರ್ಕರ್ ಪಕ್ಷ, ನಮ್ಮ ದೇಶದ ಅಮೃತ ಮಹೋತ್ಸವ ಆಚರಿಸಲು ಹೊರಟಿದೆ ಎನ್ನುವುದು ಭಾರತದ ದುರಾದೃಷ್ಟ. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ ಉಳಿಸಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು, ಎನ್ನುವ ಸಂದರ್ಭದಲ್ಲಿ ಒಂದು ರೀತಿಯ ಭಾವನಾತ್ಮಕ ವಿಚಾರಗಳನ್ನು ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಭಾಷೆ ಭಾಷೆಯ ಒಳಗಡೆ ವಿಭಾಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅದರ ವಿರುದ್ಧ ಜನಜಾಗೃತಿ ಮೂಡಿಸುವುದು ಭಾರತ ನಡಿಗೆಯ ಉದ್ದೇಶ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ಕೋಮು ಭಾವನೆಗಳನ್ನು ಬಂಡವಾಳ ಮಾಡಿಕೊಂಡು ತಿರುಗುವ ಬಿಜೆಪಿ, ದಕ್ಷಿಣ ಕನ್ನಡದಲ್ಲಿ ಮೂರು ಕೊಲೆಗಳಾದರೂ ಸಂವಿಧಾನ ಪ್ರಕಾರ ಪ್ರಮಾಣವಚನ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಭೇಟಿ ಸಂದರ್ಭ ತಾರತಮ್ಯ ಮಾಡುತ್ತಾರೆ ಪರಿಹಾರ ಕೊಡುವುದಿಲ್ಲ ಯಾವುದೇ ಗಾಣಿಗರ ಕುಟುಂಬಕ್ಕೂ ಪರಿಹಾರ ನೀಡಿಲ್ಲ ಸರ್ಕಾರ ಎನ್ನುವುದು ಪಕ್ಷಕ್ಕೆ ಸೀಮಿತವಾಗಬಾರದು ಎಂದು ಸೊರಕೆ ಹೇಳಿದರು.

Edited By : Manjunath H D
PublicNext

PublicNext

09/08/2022 09:32 am

Cinque Terre

45.85 K

Cinque Terre

12

ಸಂಬಂಧಿತ ಸುದ್ದಿ