ಉಡುಪಿ: ಉಡುಪಿ ಜಿಲ್ಲೆಯಲ್ಲಿ 144.8 ಸೆಂ.ಮೀ ಮಳೆ ಸುರಿಯಬೇಕಾದಲ್ಲಿ 188.8 ಸೆಂ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.30ರಷ್ಟು ಹೆಚ್ಚು ಮಳೆಯಾಗಿದೆ. ಈ ಋತುವಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಉಡುಪಿ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪಗಳು ಸಂಭವಿಸಿವೆ. ನೂರಾರು ಮನೆಗಳಿಗೆ ಹಾನಿಯಾಗಿವೆ. ತಕ್ಷಣದ ಪರಿಹಾರಕ್ಕಾಗಿ ಉಡುಪಿ ಜಿಲ್ಲೆಗೆ ಸರಕಾರ 15 ಕೋಟಿ ರೂ. ಬಿಡುಗಡೆಗೊಳಿಸಿದೆ.
ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಆದ ಮಾನವ ಜೀವಹಾನಿ, ಜಾನುವಾರು ಜೀವ ಹಾನಿ, ಬೆಳೆ ಹಾನಿ, ಮನೆ ಹಾನಿ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಲು ಈ ಅನುದಾನ ಬಿಡುಗಡೆಗೊಳಿಸಲಾಗಿದೆ.
ಪ್ರಾಕೃತಿಕ ವಿಕೋಪದಿಂದಾಗಿ ಈತನಕ 155 ಜನರನ್ನು ಸ್ಥಳಾಂತರ ಮಾಡಲಾಗಿದ್ದು 71 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
38 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದರೆ ,335 ಮನೆಗಳು ಬಾಗಶಃ ಹಾನಿಗೊಂಡಿವೆ. 933.86 ಹೆಕ್ಟೇರ್ ಕೃಷಿಗೆ ಹಾನಿಯಾಗಿದ್ದು, 11.92 ಹೆಕ್ಟೇರ್ ತೋಟ ಹಾನಿಗೊಂಡಿದೆ.ಮಳೆಗೆ ಒಟ್ಟು 89 ಸೇತುವೆಗಳಿಗೆ ಹಾನಿಯಾಗಿದೆ.ಮೆಸ್ಕಾಂ ಇಲಾಖೆಗೆ ಸೇರಿದ 1363 ಕಂಬಗಳು, 247 ಟ್ರಾನ್ಸ್ ಫಾರ್ಮರ್ , 38.21 ಕಿಮೀ ವೈರ್ ಹಾನಿಯಾಗಿದೆ.
ಒಟ್ಟು 1164.03 ಕಿಮೀ ರಸ್ತೆಗೆ ಹಾನಿಯಾಗಿದೆ. ಇನ್ನು 55 ನಾಡದೋಣಿ ಮತ್ತು 66 ಬಲೆಗಳಿಗೆ ಹಾನಿಯಾಗಿದೆ.
Kshetra Samachara
08/08/2022 04:53 pm