ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಿದ್ದರಾಮಯ್ಯ-ಡಿಕೆಶಿ ಬಲಾತ್ಕಾರದ ಆಲಿಂಗನ: ಯಾವಾಗ ಡೈವರ್ಸ್ ಆಗುತ್ತೋ ಗೊತ್ತಿಲ್ಲ: ಸುನಿಲ್ ವ್ಯಂಗ್ಯ!

ಉಡುಪಿ: ಸಿದ್ದರಾಮಯ್ಯ ಮತ್ತು ಡಿಕೆಶಿ ದಾವಣಗೆರೆ ಸಮಾವೇಶದಲ್ಲಿ ಮಾಡಿಕೊಂಡದ್ದು ಬಲಾತ್ಕಾರದ ಆಲಿಂಗನ.ಹಾಗಾಗಿ ಯಾವಾಗ ಡೈವರ್ಸ್ ಆಗುತ್ತೋ ಗೊತ್ತಿಲ್ಲ ಎಂದು ಇಂಧನ ಸಚಿವ ಸು‌ನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಆಗಮಿಸಿದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಆಲಿಂಗನ ಸಹಜವಾಗಿರಬೇಕು.ಪರಸ್ಪರ ಒಪ್ಪಿಗೆಯಿಂದ ಕೂಡಿರಬೇಕು.ಆದರೆ ಅವರಿಬ್ಬರದ್ದು ಯಾರದೋ ಬಲಾತ್ಕಾರದಲ್ಲಿ ಮಾಡಿರುವಂತಹ ಅಲಿಂಗನ.ಹಾಗಾಗಿ ಯಾವಾಗ ಡೈವರ್ಸ್ ಆಗುತ್ತೋ ಗೊತ್ತಿಲ್ಲ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬಿಬಿಎಂಪಿ ಕ್ಷೇತ್ರ ವಿಂಗಡಣೆಯನ್ನು ಪಾರದರ್ಶಕವಾಗಿ‌ ಮಾಡಿದ್ದೇವೆ.ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು.ಈಗ ಕಾಂಗ್ರೆಸ್ ನಮಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ.ಈ ಹಿಂದೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದು ನಮಗೆ ತಿಳಿದಿದೆ ಎಂದರು.

Edited By : Shivu K
PublicNext

PublicNext

06/08/2022 04:12 pm

Cinque Terre

35.56 K

Cinque Terre

8

ಸಂಬಂಧಿತ ಸುದ್ದಿ