ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಮೃತ ಫಾಝಿಲ್ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ, ಸಾಂತ್ವನ

ಸುರತ್ಕಲ್: ಸುರತ್ಕಲ್ ನಲ್ಲಿ ಹತ್ಯೆಗೀಡಾದ ಫಾಝಿಲ್ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ‌. ಕುಮಾರಸ್ವಾಮಿ ಭೇಟಿ‌ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಅವರು ಫಾಝಿಲ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ಕನ್ನು ನೀಡಿದಾಗ ಚೆಕ್ಕ‌ನ್ನು ಪಡೆಯಲು ಮೊದಲು ನಿರಾಕರಿಸಿದ ಫಾಝಿಲ್ ತಂದೆ ಬಳಿಕ ಒತ್ತಾಯದ ಮೇರೆಗೆ ಸ್ವೀಕರಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೊಲೆಗಡುಕರಿಗೆ ತಕ್ಕ ಶಿಕ್ಷೆ ಆಗಬೇಕು. ಇದಕ್ಕೆ ಬೇಕಾದ ಕಾನೂನು‌ ಹೋರಾಟದಲ್ಲಿ ಪಕ್ಷ ಕುಟುಂಬದ ಜತೆ ನಿಲ್ಲಲಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಹ ಪೈಶಾಚಿಕ‌ ಕೃತ್ಯಕ್ಕೆ ತಡೆ ನೀಡುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಯುವಕರು ಸ್ವಬುದ್ಧಿಯಿಂದ ಜೀವನ ನಡೆಸಬೇಕು.

ಪ್ರವೀಣ್, ಫಾಝಿಲ್, ಮಸೂದ್ ಈ ಮೂವರೂ ಅಮಾಯಕರು ಎಂಬುದು ತಿಳಿದಿದೆ. ನ್ಯಾಯ ಒದಗಿಸಲು ಕುಟುಂಬದ ಜತೆ ಇರುವುದಾಗಿ ಭರವಸೆ ನೀಡಿದ್ದೇನೆ ಎಂದರು. ಈ ಸಂದರ್ಭ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮುಖಂಡರಾದ ಬಿ.ಎಂ. ಫಾರೂಕ್, ಮಮ್ತಾಜ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

01/08/2022 07:44 pm

Cinque Terre

20.16 K

Cinque Terre

0

ಸಂಬಂಧಿತ ಸುದ್ದಿ