ಉಳ್ಳಾಲ: ಅಧಿಕಾರ ಯಾವತ್ತೂ ಶಾಶ್ವತವಲ್ಲ,ನನಗೆ 2023 ರ ತನಕ ಜನರು ಅಧಿಕಾರ ಕೊಟ್ಟಿದ್ದಾರೆ. ಆ ಅವಧಿಯಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯ ಆಗಬೇಕು ಅದನ್ನ ಮಾಡೋದೇ ನನ್ನ ಮೂಲಮಂತ್ರ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ತೊಕ್ಕೊಟ್ಟು ಚೆಂಬುಗುಡ್ಡೆಯ ಬ್ರಹ್ಮಶ್ರೀ ಮುಗೇರ ಮಹಾಂಕಾಳಿ ದೈವಸ್ಥಾನಕ್ಕೆ ಶಾಸಕರ ಅನುದಾನದಲ್ಲಿ ನಿರ್ಮಿಸಿದ ನೂತನ ಸುಸಜ್ಜಿತ ಮೇಲ್ಛಾವಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನರು ಎಂದಿಗೂ ನೆನಪಿಡುವ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಲ್ಲಿ ನನ್ನ ಮನಸಿಗೂ ಸಂತೃಪ್ತಿ ದೊರೆಯುತ್ತದೆ.ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ಸಿಗುತ್ತೆ ಎಂಬ ಯಾವುದೇ ಅಭಿಲಾಷೆ ಇಲ್ಲ.ನನಗೆ 2023 ರ ತನಕ ಕೊಟ್ಟ ಅಧಿಕಾರ,ಜವಬ್ದಾರಿಯನ್ನ ಸಮರ್ಪಕವಾಗಿ ಬಳಸೋದೇ ನನ್ನ ಅಭಿವೃದ್ಧಿಯ ಮೂಲ ಮಂತ್ರ ಎಂದರು.
Kshetra Samachara
01/08/2022 01:32 pm