ಸುಳ್ಯ: ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ನಾಯಕರ ನಿಯೋಗ ಇಂದು ಭೇಟಿ ನೀಡಿತು.
ಬಿ.ಕೆ.ಹರಿಪ್ರಸಾದ್ , ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭೇಟಿ ನೀಡಿದಾಗ ಪ್ರವೀಣ್ ಬೆಂಬಲಿಗರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಡಿಸಿದರು. ಘಟನೆ ನಡೆದ ದಿನ ಎಲ್ಲಿ ಹೋಗಿದ್ರಿ? ಎಂದು ಪ್ರಶ್ನಿಸಿ ಧಿಕ್ಕಾರ ಕೂಗಿದರು.
ಈ ಸಂದರ್ಭ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವೇ ಘಟನೆಗೆ ಕಾರಣ. ಹೀಗಾಗಿ ಪ್ರಕರಣವನ್ನು ಎನ್ ಐಎ ಗೆ ನೀಡಿದ್ದಾರೆ. ಒಂದು ವಾರವಾದ್ರೂ ನೈಜ ಆರೋಪಿಗಳನ್ನು ಬಂಧಿಸಿಲ್ಲ. ಇವರ ಪಕ್ಷದವರಿಗೇ ರಕ್ಷಣೆ ಕೊಟ್ಟಿಲ್ಲಾಂದ್ರೆ ಬೇರೆಯವರಿಗೆ ಹೇಗೆ ರಕ್ಷಣೆ ನೀಡ್ತಾರೆ ಎಂದರು.
ಇನ್ನು, ಗೃಹ ಸಚಿವರ ಮನೆಗೆ ಎಬಿವಿಪಿ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಮೊಸಳೆ ಕಣ್ಣೀರು ಹಾಕಿದ್ರೆ ಯಾರೂ ನಂಬೋದಿಲ್ಲ. ಬಿಜೆಪಿ ಆಡಳಿತ ಬಂದ ಮೇಲೆ ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ತೇಜಸ್ವಿ ಸೂರ್ಯ ಹೇಳಿಕೆ ಬಾಲಿಶ ಹೇಳಿಕೆ. ಅವರು ಜವಾಬ್ದಾರಿಯಿಂದ ಮಾತನಾಡುವುದು ಕಲಿಯಬೇಕು.
ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದಾರೆ. ಇವರು ಇಂತಹ ಕೆಲಸ ಮಾಡಿಸುತ್ತಿದ್ದಾರೆ. ಆದ್ರೆ, ಯಾರೂ ದೊಡ್ಡವರು ಬಲಿಯಾಗೋದಿಲ್ಲ. ಗ್ರಾಮದ ಬಡಜನರಷ್ಟೇ ಬಲಿಯಾಗ್ತಾರೆ ಎಂದರು.
Kshetra Samachara
31/07/2022 06:46 pm