ಉಡುಪಿ: ಉಡುಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಪ್ರವೀಣ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ರಘುಪತಿ ಭಟ್, ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ಮುಸ್ಲಿಂ ಸಮಾಜ ದೂರವಿಟ್ಟಾಗ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಹಿಜಾಬ್ ವಿವಾದದಲ್ಲಿ ಕೈಜೋಡಿಸಿದ ಭಯೋತ್ಪಾದಕ ಜಿಹಾದಿ ಸಂಘಟನೆಗಳು ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲೂ ಕೈ ಜೋಡಿಸಿವೆ. ಹಿಜಾಬ್ ವಿವಾದ ಆದಾಗಲೇ ಇದನ್ನು ನಾವು ಹೇಳಿದ್ದೆವು. ಆದರೆ, ಪ್ರಾಣ ತೆಗೆಯುವ ಹಂತಕ್ಕೆ ಇವತ್ತು ಅವರು ಬಂದಿದ್ದಾರೆ. ಸರಕಾರ ಬಿಜೆಪಿ ಕಾರ್ಯಕರ್ತರ ಪರವಾಗಿ ಸದಾ ನಿಲ್ಲಲಿದೆ. ಪ್ರವೀಣ್ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದರು.
Kshetra Samachara
30/07/2022 03:47 pm