ಮಂಗಳೂರು: ಸರ್ಕಾರ ಹತ್ಯೆಯಾದವರ ಕುಟುಂಬಕ್ಕೆ ಸಮಾನವಾಗಿ ಪರಿಹಾರ ನೀಡಲಿ. ಹತ್ಯೆಯಾದವರ ಕುಟುಂಬಕ್ಕೆ ಸಿಎಂ ತಮ್ಮ ಕಿಸೆಯಿಂದ ಹಣ ನೀಡುವುದಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಓರ್ವ ಹತ್ಯೆಯಾದವನ ಮನೆಗೆ ಬಂದು ಮಾತನಾಡಿ, "ಸಿಎಂ ಪರಿಹಾರ ಕೊಡುತ್ತಾರೆ. ಮತ್ತೋರ್ವನ ಬಗ್ಗೆ ಮಾತನಾಡೋದೇ ಇಲ್ಲ. ಪರಿಹಾರವೂ ಕೊಡೋದಿಲ್ಲ. ಪ್ರತಿ ತಾಯಿಗೂ ಮಕ್ಕಳನ್ನು ಕಳೆದುಕೊಂಡ ನೋವು ಇರುತ್ತದೆ. ಆ ನೋವು ಸರ್ಕಾರಕ್ಕಿಲ್ಲ. ಸಿಎಂ ಹಾಗೂ ಸರ್ಕಾರ ಪರಿಹಾರ ನೀಡುವಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ಸಿಎಂ, ಗೃಹ ಸಚಿವರು ಬಂದಾಗ ಗಲಭೆಗಳು ನಿಲ್ಲುತ್ತದೆ. ಆದರೆ ಇಲ್ಲಿ ಮುಖ್ಯಮಂತ್ರಿ ಬಂದು ಫ್ಲೈಟ್ ಹತ್ತಿಲ್ಲ. ಆಗಲೇ ಮರ್ಡರ್ ಆಗಿದೆ" ಎಂದು ವ್ಯಂಗ್ಯವಾಡಿದರು.
ಸರ್ಕಾರ ಮುಂಜಾಗ್ರತಾ ವಹಿಸದಿರುವುದೇ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆಯಲು ಕಾರಣ. ಜನರಿಗೂ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಸಿಎಂ ಜನರ ತೆರಿಗೆ ಹಣದಿಂದ ಪರಿಹಾರ ಕೊಡುತ್ತಾರೆ. ವಿನಃ ಅವರ ಕಿಸೆಯಿಂದ ಕೊಡುವುದಲ್ಲ. ವಿಧಾನದಲ್ಲಿ ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯವೇ. ಇದು ಸಿಎಂ ಸ್ಥಾನಕ್ಕೆ ಕಪ್ಪು ಚುಕ್ಕೆ. ಸರ್ಕಾರ ಹಾಗೂ ಸಿಎಂ ಮತಾಂಧ ಶಕ್ತಿಗಳಿಗೆ ಹೆದರುತ್ತಿದೆ. ಹೆದರಿ ನಿರ್ಭಯವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
Kshetra Samachara
29/07/2022 09:44 pm