ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಾರ್ಯಕರ್ತರ ಹತ್ಯೆಯಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ: ಸಚಿವ ಕೋಟ

ಕುಂದಾಪುರ: ಪ್ರವೀಣ್ ಕೊಲೆಯಿಂದ ಎಲ್ಲರಿಗೂ ನೋವಾಗಿದೆ. ಪಕ್ಷದ ತಳ ಮಟ್ಟದ ಕಾರ್ಯಕರ್ತರು ಕೋಪದಿಂದ, ರೋಷದಿಂದ ಮಾತನಾಡಿದ್ದಾರೆ.

ಕಾರ್ಯಕರ್ತರಿಗೆ ವಸ್ತುನಿಷ್ಟ ವಿಚಾರವನ್ನು ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿ ಈ ಬಾರಿ ಷಡ್ಯಂತ್ರವನ್ನು ಭೇದಿಸಲು ಸಿಎಂ, ಗೃಹಮಂತ್ರಿ ಮತ್ತು ಸರಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ ಬೇರೆ ಮಾರ್ಗ ಇಲ್ಲ. ಪ್ರಕರಣದ ಬಗ್ಗೆ ನಿದಾರ್ಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ದುರದೃಷ್ಟಕ್ಕೆ ಮತೀಯವಾದದ ಕಂಪನಿಗಳು ಕಾನೂನಿಗೆ ಸೆಡ್ಡು ಹೊಡೆದಾದರೂ ಹಿಂಸೆಯನ್ನು ಬಲಗೊಳಿಸಲು ಪ್ರಯತ್ನ ಮಾಡುತ್ತಿವೆ. ರಾಷ್ಟ್ರೀಯತೆ ಎನ್ನುವವರನ್ನು ಭಾರತೀಯತೆ ಎಂದು ಹೇಳುವವರನ್ನು ನಿಯಂತ್ರಣಕ್ಕೆ ತರಬೇಕು. ಹಿಂದುತ್ವ ಎಂದವರನ್ನು ಬಗ್ಗು ಬಡಿಯಬೇಕು ಎನ್ನುವ ಭಾವನೆ ಜಾಸ್ತಿಯಾಗುತ್ತಿದೆ ಎಂದ ಅವರು, ಇಂಥವರ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊತ್ತೆ. ಹಿಂದೆ ಕೊಲೆಯಾದ ಪರೇಶ್ ಮೇಸ್ತನ ತಂದೆ ತಾಯಿ ಇಂದಿಗೂ ನನ್ನ ಸಂಪರ್ಕದಲ್ಲಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕರ್ತರು ಮನಸಿಗೆ ಉಂಟಾದ ನೋವಿನಿಂದ ಸಾಮೂಹಿಕ ರಾಜಿನಾಮೆಗೆ ಇಳಿದಿದ್ದಾರೆ. ನಮ್ಮದೇ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಿದ್ದಾರೆ, ನಮಗಾಗಿ ಕೆಲಸ ಮಾಡಿದ್ದಾರೆ. ಅವರು ಹೇಳಿರುವ ಮಾತುಗಳ ಬಗ್ಗೆ ಕ್ರಮವಹಿಸುತ್ತೇವೆ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

29/07/2022 05:35 pm

Cinque Terre

11.1 K

Cinque Terre

7

ಸಂಬಂಧಿತ ಸುದ್ದಿ