ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಇಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಅವರ ಮನೆಯವರಿಗೆ ಸಾಂತ್ವನ ಹೇಳಿದರು.
ಪ್ರವೀಣ ಪತ್ನಿ ತಾಯಿ, ತಂದೆ ಹಾಗೂ ಕುಟುಂಬಸ್ಥರ ನೋವನ್ನು ಆಲಿಸಿದರು. ಬಳಿಕ ಅವರು ಸಚಿವ ಎಸ್.ಅಂಗಾರ ಹಾಗೂ ಇತರ ಶಾಸಕರ ಜತೆ ಸಮಾಲೋಚಿಸಿ ಪ್ರವೀಣ್ ನೆಟ್ಟಾರು ಪತ್ನಿ ನೂತನರಿಗೆ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು ಪ್ರವೀಣ್ ಬಡವರಾಗಿದ್ದು, ಅವರ ಕುಟುಂಬಕ್ಕೆ ಆಧಾರವಾಗಿದ್ದ ಪ್ರವೀಣರನ್ನು ಕಳಕೊಂಡು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ಆದ್ದರಿಂದ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಅವರ ಮನೆ ಸಹ ತುಂಬ ಚಿಕ್ಕದಾಗಿದೆ. ಹೊಸ ಮನೆ ಕಟ್ಟಲು ಪ್ರವೀಣ್ ಸಿದ್ದತೆ ನಡೆಸಿದ್ದರು. ಆದ್ದರಿಂದ ಅವರಿಗೆ ಹೊಸ ಮನೆಯನ್ನು ಸಹ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು. ಹತ್ಯೆಕೋರರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ವಿಜಯೇಂದ್ರ ಭರವಸೆ ನೀಡಿದರು.
ಸಚಿವ ಎಸ್. ಅಂಗಾರ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಶಾಸಕರಾದ ಸಂಜೀವ ಮಠಂದೂರು. ರಾಜೇಶ್ ನಾಯಕ್ ಉಳಿಪಾಡಿಗುತ್ತು , ಹರೀಶ್ ಪೂಂಜಾ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮೊದಲಾದವರು ಇಂದು ನೆಟ್ಟಾರಿಗೆ ಆಗಮಿಸಿದ್ದರು.
PublicNext
29/07/2022 07:49 am