ಮುಲ್ಕಿ: ಜಿಹಾದಿಗಳ ಕ್ರೌರ್ಯಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರ್ ಅವರಿಗೆ ಲಿಂಗಪ್ಪಯ್ಯಕಾಡು ವೀರ ಕೇಸರಿ ತರುಣ ವೃಂದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮುಲ್ಕಿ ಮೂಡುಬಿದಿರೆ ಮಂಡಲಾಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ಹಿಂದುಗಳು ಒಗ್ಗಟ್ಟಾಗಬೇಕಾಗಿದೆ. ಸಂಘಟನೆಯ ಜೊತೆ ನಾವೂ ಬೆಳೆಯ ಬೇಕಾಗಿದೆ. ಅಮಾಯಕ ಪ್ರವೀಣ್ ನನ್ನು ಕೊಂದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ವೀರಕೇಸರಿ ತರುಣ ವೃಂದ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಉಮೇಶ್, ಹಿಂದೂ ಸಂಘಟನೆಗಳ ನಾಯಕರಾದ ಶ್ಯಾಮ್ ಪ್ರಸಾದ್, ನವೀನ್ ರಾಜ್, ವಿಠ್ಠಲ್ ಎನ್. ಎಮ್., ಶಶಿಕುಮಾರ್, ಸಂತೋಷ್ ದೇಸುಣಿಗಿ, ಸುನಿಲ್ ಇಟಗ, ಬಸು ಜಮಾದಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರವೀಣ್ ಗೆ ದೀಪದ ಬೆಳಕಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
Kshetra Samachara
28/07/2022 10:31 pm