ಸುಳ್ಯ : ಬಿಜೆಪಿ ಮಂಗಳೂರು ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ 21 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಕೊಲೆ ಮಾಡಲು ನೆರವು ನೀಡಿದ ಶಂಕೆ ಹಿನ್ನಲೆಯಲ್ಲಿ ಒಟ್ಟು 6 ತಂಡಗಳನ್ನು ರಚನೆ ಮಾಡಿದ ಪೊಲೀಸರು, 21 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಮಧ್ಯೆ ಇಂದು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು ಇದರಲ್ಲಿ ಓರ್ವ ಅದೇ ಪರಿಸರದ ಶಾಫೀಕ್ ಸವಣೂರು ಆಗಿದ್ದಾನೆ. ಇದೀಗ ಈತನ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಆತನ ಹಾಗೂ ಸಮೀಪದ ಎಲ್ಲಾ ಮುಸ್ಲಿಂ ಅಂಗಡಿಗಳನ್ನು ಆಕ್ರೋಶಿತರು ಧ್ವಂಸ ಮಾಡಿದ್ದಾರೆ.
ಗುತ್ತಿಗಾರಿನಲ್ಲಿರುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದು ಸದ್ಯ ಪರಿಸರ ಉದ್ವಿಗ್ನಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಗಮನಕ್ಕೂ ಮುನ್ನ ಈ ರೀತಿಯ ಬೆಳವಣಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Kshetra Samachara
28/07/2022 06:06 pm