ಉಡುಪಿ: ಉಡುಪಿ ಜಿಲ್ಲೆಗೆ ಮಾರಕ ಎಂದು ಪರಿಗಣಿಸಲಾದ ಕಸ್ತೂರಿ ರಂಗನ್ ವರದಿಯ ಕುರಿತ ಕೇಂದ್ರ ಅರಣ್ಯ ಸಚಿವ ಭೂಪೆಂದ್ರ ಯಾದವ್ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಭೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ನಮ್ಮನ್ನು ಕಸ್ತೂರಿ ರಂಗನ್ ವರದಿ ಚಿಂತೆಗೀಡು ಮಾಡಿತ್ತು. ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರ ಸರಕಾರ ಒಂದು ನಿಲುವು ತೆಗೆದುಕೊಂಡಿದೆ. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ಸ್ಯಾಟಲೈಟ್ ಇಮೇಜ್ ಮೂಲಕ ಗಮನಿಸಿದಾಗ ಹಸಿರು ಇರುವುದನ್ನೆಲ್ಲ ಕಾಡು ಎಂದು ಪರಿಗಣಿಸಲಾಗಿದೆ ಎನ್ನುವುದು ನಮ್ಮ ಆಕ್ಷೇಪವಾಗಿತ್ತು. ತೆಂಗು, ಅಡಿಕೆ, ಕಾಫಿ, ಟೀ ತೋಟಗಳಿರುವಲ್ಲೆಲ್ಲ ಹಸಿರು ಕಂಡಿದ್ದು ಅದನ್ನು ಕಾಡು ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಕುರಿತು ಪ್ರತಿ ಗ್ರಾಮಗಳಿಗೆ ತೆರಳಿ ಎಷ್ಟು ಕಾಡಿದೆ ಎನ್ನುವ ಫಿಸಿಕಲ್ ಸರ್ವೇಯಾಗಬೇಕು.
ಫಿಸಿಕಲ್ ಸರ್ವೇ ವಿಚಾರವಾಗಿ ನಾವು ಹಿಂದೆ ಮನವಿ ಮಾಡಿದ್ದೇವೆ. ನರೇಂದ್ರ ಮೋದಿ ಸರಕಾರ, ಭೂಪೇಂದ್ರ ಯಾದವ್ ನೇತೃತ್ವದಲ್ಲಿ ಒಂದು ತಿರ್ಮಾನಕ್ಕೆ ಬಂದಿದೆ. ಈ ವರದಿ ಪರಿಶೀಲನೆಗಾಗಿ ಪ್ರತಿ ಹಳ್ಳಿಗಳಿಗೆ ತೆರಳಿ, ಅಲ್ಲಿನ ನಿವಾಸಿಗಳನ್ನು ಭೇಟಿಯಾಗಿ ನಂತರ ವರದಿ ಕೋಡಬೇಕು ಎಂಬ ತೀರ್ಮಾನವಾಗಿದೆ. ಇದರಿಂದಾಗಿ ನಮಗೆ ಈಗ ಉಸಿರಾಡುವಂತಾಗಿದೆ. ಮುಂದಿನ ಒಂದು ವರ್ಷದಲ್ಲಿ ನಮ್ಮ ಭಾವನೆಗಳಿಗೆ ಸ್ಪಂದನೆ ಸಿಗುವ ಭರವಸೆಯಿದೆ ಎಂದು ಸಚಿವೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.
PublicNext
27/07/2022 01:01 pm