ಉಡುಪಿ: ಪಿಎಸ್ ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಬಡಿದಿತ್ತು ಎಂದು ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಾರ್ಟಿ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ.
ಉಡುಪಿಯಲ್ಲಿ ಹೇಳಿಕೆ ನೀಡಿದ ಭಾಸ್ಕರ್ ರಾವ್,ನಾನು ಬೆಂಗಳೂರು ಸಿಟಿ ಪೋಲಿಸ್ ಕಮಿಷನರ್ ಆಗಿರುವಾಗ ಅಮೃತ್ ಪೌಲ್ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಇತ್ತು.ಪದೇಪದೆ ಮುಖ್ಯಮಂತ್ರಿ ಮನೆಗೆ ಬರುವಾಗ ನಾನು ಈ ಬಗ್ಗೆ ಪ್ರಶ್ನೆ ಮಾಡಿದ್ದೆ.ಇದು ಹಗರಣ ಎಂಬುದಾಗಿ ನನಗೆ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ.
ಆಪ್ ,ಗವರ್ನರ್ ಬಳಿ ಈ ವಿಷಯ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ. ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎಂಬುದು ತಪ್ಪು ನೀತಿ. ನೀವು ಯುವಜನರಿಗೆ ಮೋಸ ಮಾಡುತ್ತಿದ್ದೀರಿ.ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ.
ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ಇನ್ವೆಸ್ಟಿಗೇಟರ್ ಆಫೀಸರ್ ಆಗುತ್ತಾರೆ.ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೆ.
ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ.ಕರ್ನಾಟಕದಲ್ಲಿ ಲೋಕಾಯುಕ್ತ ಮತ್ತು ಎಸಿಬಿ ಎರಡು ಸಂಸ್ಥೆಗಳು ಇದ್ದರೂ ಭ್ರಷ್ಟಾಚಾರ ನಡೆಯುತ್ತಲೇ ಇದೆ.ಬಿಜೆಪಿ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಮಾತಾಡಿತ್ತು.
ಎಸಿಬಿಯನ್ನು ಮುಖ್ಯಮಂತ್ರಿಯೇ ತೆಗೆದುಕೊಂಡ ನಂತರ ಭ್ರಷ್ಟಾಚಾರ ಏನು ಕಡಿಮೆ ಆಗಿದೆಯಾ? ಎಂದು ಪ್ರಶ್ನಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪರಿಗೆ ಕ್ಲೀನ್ ಚಿಟ್ ವಿಚಾರವಾಗಿ ಮಾತನಾಡಿದ ಅವರು,ಏನೂ ಸಾವು ಕೂಡಾ ಆಗಿಲ್ಲವಾ? 306 ಕೇಸ್ ನಲ್ಲಿ ಈಶ್ವರಪ್ಪನವರಿಗೆ ಯಾಕೆ ಅರೆಸ್ಟ್ ಮಾಡಿಲ್ಲ? ಎಂದು ಆಪ್ ಉಪಾಧ್ಯಕ್ಷ್ಯ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪ್ರಶ್ನಿಸಿದರು.
ಗುತ್ತಿಗೆದಾರನ ಹೆಂಡತಿ ನ್ಯಾಯ ಕೇಳಲು ಗೃಹ ಮಂತ್ರಿಗಳ ಬಳಿ ಹೋದಾಗ ಬೈದು ಬಿಟ್ಟು ಕಳಿಸಿಲ್ಲವಾ?ನಿಮಗೆ ಅಧಿಕಾರದ ಮದ ಏರಿದೆ ರಾಮನ ಭಕ್ತರು ಎನ್ನುತ್ತೀರಲ್ಲಾ? ನಿಮ್ಮನ್ನು ರಾಮ ಕೂಡಾ ಕ್ಷಮಿಸಲ್ಲ ಎಂದರು.
PublicNext
26/07/2022 08:33 pm