ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಬ್ ದಾಳಿ ವಿಚಾರದಲ್ಲಿ ಕಮಿಷನರ್ ಕೇಸ್ ದಾಖಲಿಸಿದರೆ ಗಂಟುಮೂಟೆ ಕಟ್ಟಬೇಕಾಗುತ್ತದೆ"

ಮಂಗಳೂರು: ಪಬ್ ದಾಳಿ ವಿಚಾರದಲ್ಲಿ ಪೊಲೀಸ್ ಕಮಿಷನರ್ ಪ್ರಕರಣ ದಾಖಲಿಸುತ್ತೇನೆ ಎಂದಲ್ಲಿ ಸರಕಾರ ಸಾಯಂಕಾಲವೇ ಗಂಟುಮೂಟೆ ಕಟ್ಟಿ ಕೊಟ್ಟು ಕಳುಹಿಸಿ ಬಿಡುತ್ತೆ‌. ಆದ್ದರಿಂದ ಪೊಲೀಸ್ ಕಮಿಷನರ್ ಬೇರೆ ವಿಧಿ ಇಲ್ಲದೆ ಅಲ್ಲಿ ಯಾವುದೇ ನೈತಿಕ ಪೊಲೀಸ್ ಗಿರಿ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ. ಅವರು ಅಸಹಾಯಕರು ಅಷ್ಟೇ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಆಪ್ ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು.

ನಿನ್ನೆ ನಗರದಲ್ಲಿ ಪಬ್ ದಾಳಿ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಪ್ರೋತ್ಸಾಹವಿದ್ದಾಗ ಮಾತ್ರ ನೈತಿಕ ಪೊಲೀಸ್ ಗಿರಿ ನಡೆಯುತ್ತದೆ. ಪೊಲೀಸ್ ಇಲಾಖೆ ಸರಕಾರದ ಕೈಗೊಂಬೆಯಾಗಿದೆ. ನೈತಿಕ ಪೊಲೀಸ್ ಗಿರಿ ಮಾಡುವವರಿಗೆ ರಕ್ಷಣೆ ದೊರಕುತ್ತಿರುವುದು ವಿಪರ್ಯಾಸ. ಇಲಾಖೆಯಲ್ಲಿ ಯಾರಾದರೂ ಇದು ತಪ್ಪು ಎಂದು ನೇರವಾಗಿ ಹೇಳುವವರು ಉಳಿಯೋದು ಕಷ್ಟ ಎಂದರು.

ಇದು ಎಲ್ಲಾ ಪಕ್ಷಗಳಿಗೂ ಅನ್ವಯ. ನಮ್ಮ ಪಕ್ಷಕ್ಕೂ ಅನ್ವಯವಾಗುತ್ತದೆ. ಈ ಬಗ್ಗೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ತಕ್ಷಣ ನಮ್ಮ ಆಪ್ ಪಕ್ಷದ ಜಿಲ್ಲಾಧ್ಯಕ್ಷರ ಮೂಲಕ ಹೆಚ್ಚಿನ ಮಾಹಿತಿ ಪಡೆದು ಈ ಬಗ್ಗೆ ನಿಲುವನ್ನು ತಾಳುತ್ತೇವೆ‌. ಅಲ್ಲಿ ನಿನ್ನೆ ನೈತಿಕ ಪೊಲೀಸ್ ಗಿರಿ ನಡೆದಿದ್ದಲ್ಲಿ‌ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿದರು.

Edited By :
Kshetra Samachara

Kshetra Samachara

26/07/2022 07:41 pm

Cinque Terre

5.45 K

Cinque Terre

0

ಸಂಬಂಧಿತ ಸುದ್ದಿ