ಮಂಗಳೂರು: ಚಿಕ್ಕಮಗಳೂರು ಯೂತ್ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರು ಹೊಡೆದಾಟದ ಬಗ್ಗೆ ಈಗಾಗಲೇ ವರದಿ ಕೇಳಿದ್ದೇನೆ. ತನಿಖೆ ಮಾಡಿ ತಕ್ಕ ಶಿಕ್ಷೆ ನೀಡಲಾಗುತ್ತದೆ. ಯೂತ್ ಕಾಂಗ್ರೆಸ್ ನಲ್ಲಿ ಪದೇ ಪದೆ ಹೊಡೆದಾಟ ಆಗ್ತಿಲ್ಲ. ಯುವಕರ ನಡುವೆ ಭಿನ್ನಾಭಿಪ್ರಾಯ ಆಗಿದೆ, ಹಾಗಾಗಿ ಮಾತನಾಡಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಕಾರ್ಯಕರ್ತರ ನಡುವೆ ಹೊಡೆದಾಟ ಆಗಿದೆ ಎಂದರು.
ಇನ್ನು, ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ದೊಡ್ಡವರ ವಿಚಾರಕ್ಕೆ ಯೂತ್ ಕಾಂಗ್ರೆಸ್ ತಲೆ ಹಾಕೋದಿಲ್ಲ. ನಮಗೆ 2023ರಲ್ಲಿ ಪಕ್ಷ ಅಧಿಕಾರಕ್ಕೆ ತರೋದು ಮಾತ್ರ ಗುರಿ. ಎಲ್ಲೂ ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ ಈ ಬಗ್ಗೆ ಹೇಳಿಲ್ಲ. ಬಾಕಿ ಇರುವವರು ಈ ಬಗ್ಗೆ ಮಾತನಾಡುತ್ತಿದ್ದಾರೆ.
ಅವರಿಬ್ಬರಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಸಂಘಟಿತ ನಾಯಕತ್ವದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯನ್ನು ಎದುರಿಸುತ್ತದೆ. ಡಿ.ಕೆ. ಶಿವಕುಮಾರ್ ಮುಸ್ಲಿಮರನ್ನು ಕಡೆಗಣಿಸುತ್ತಿದ್ದಾರೆ ಆರೋಪ ಸುಳ್ಳು. ನಾನೂ ಮುಸ್ಲಿಂ ಸಮಾಜದವನು, ನನ್ನನ್ನು ಅಧ್ಯಕ್ಷ ಮಾಡಿರೋದು ಡಿಕೆಶಿ. ನನ್ನ ಕೈ ಹಿಡಿದು ಇಲ್ಲಿ ತನಕ ಬಂದು ಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಅತೀ ಹೆಚ್ಚು ಸೀಟು ಸಿಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಹಿರಿಯ ನಾಯಕ ಹರಿಪ್ರಸಾದ್ ಯೂತ್ ಕಾಂಗ್ರೆಸ್ ಹಿನ್ನಲೆಯವರು. ಅವರು ಯುವಕರಿಗೆ ಆದ್ಯತೆ ನೀಡುವ ನಂಬಿಕೆ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಯಾರೂ ಬೇಕಾದರೂ ಸಿಎಂ ಆಗಲಿ ಎಂದರು.
PublicNext
25/07/2022 07:39 pm