ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ, ಸಿದ್ದರಾಮೋತ್ಸವದ ಮೂಲಕ ದೇಶಕ್ಕೇ ಸಂದೇಶ'

ಉಡುಪಿ: ಸಿದ್ದರಾಮೋತ್ಸವ ವ್ಯಕ್ತಿಯ ವೈಭವೀಕರಣ ಅಲ್ಲ, ಬದಲಾಗಿ ಅದು ಅವರ ಅಭಿಮಾನಿಗಳ ಮತ್ತು ಕಾಂಗ್ರೆಸ್ ಪಕ್ಷದ ವೈಭವೀಕರಣ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ.

ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದೊಂದು ಪಕ್ಷದ ಸಮಾವೇಶ. ಇದನ್ನು ಡಿಕೆ ಶಿವಕುಮಾರ್ ಕೂಡ ಸ್ಪಷ್ಟಪಡಿಸಿದ್ದಾರೆ. ನಮ್ಮ ತಂದೆ ದಿ.ಬಂಗಾರಪ್ಪ ಕೂಡ ಸಮಾವೇಶಕ್ಕೆ ಹೋಗುತ್ತಿದ್ದರು. ಯಾಕೆಂದರೆ ಜನರು ಮಾಡುತ್ತಿದ್ದ ಸಮಾವೇಶ ಅದು. ಇದೂ‌ ಕೂಡ ಪಕ್ಷದ ಸಮಾವೇಶ. ಜನರು ಈಗಾಗಲೇ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಹೀಗಾಗಿ ಕರ್ನಾಟಕದಿಂದ ಇಡೀ ದೇಶಕ್ಕೊಂದು ಸಂದೇಶ ಈ ಸಮಾವೇಶದ ಮೂಲಕ ಕೊಡಲಾಗುತ್ತದೆ. ಅಂದಾಜು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

Edited By : Shivu K
PublicNext

PublicNext

23/07/2022 03:52 pm

Cinque Terre

28.95 K

Cinque Terre

2

ಸಂಬಂಧಿತ ಸುದ್ದಿ