ಉಡುಪಿ: ಭಾರತದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಚುನಾಯಿತರಾಗಿದ್ದಾರೆ. ದೇಶದ ಪ್ರಥಮ ಪ್ರಜೆಗೆ ಎಲ್ಲೆಡೆಯಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಮಾತ್ರವಲ್ಲ, ಇಡೀ ವಿಶ್ವವೇ ಭಾರತದತ್ತ ಕುತೂಹಲದಿಂದ ನೋಡುತ್ತಿದೆ.
ಈ ಸಂಭ್ರಮವನ್ನು ಉಡುಪಿಯ ಲೀಫ್ ಆರ್ಟ್ ಕಲಾವಿದ ಮಹೇಶ್ ಮರ್ಣೆ ಆವಿಸ್ಮರಣೀಯಗೊಳಿಸಿದ್ದಾರೆ. ಅಶ್ವತ್ಥ ಎಲೆಯಲ್ಲಿ ದ್ರೌಪದಿ ಮುರ್ಮು ಅವರ ಚಿತ್ರ ರಚನೆ ಮಾಡಿ ಶುಭ ಕೋರಿದ್ದಾರೆ.
ಅಶ್ವತ್ಥ ಮರದ ಎಲೆಯನ್ನು ಆಗಸದೆಡೆ ಚಾಚುತ್ತಿದ್ದಂತೆಯೇ ದ್ರೌಪದಿ ಮುರ್ಮು ಅವರ ಸುಂದರ ಚಿತ್ರ ಮೂಡುತ್ತದೆ. ಈ ಮೂಲಕ ಉಡುಪಿಯ ಕಲಾವಿದರೊಬ್ಬರು ಅತ್ಯುನ್ನತ ಪದವಿಗೆ ಏರಿದ ದೇಶದ ಪ್ರಥಮ ಪ್ರಜೆಗೆ ಗೌರವದ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
22/07/2022 06:15 pm