ಬ್ರಹ್ಮಾವರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಸುಸೈಡ್ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್ ಚಿಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಯು ಟಿ ಖಾದರ್ , ತನಿಖೆ ಸಮರ್ಪಕವಾಗಿಲ್ಲ ಎಂದು ಪಾಟೀಲ್ ಪತ್ನಿ ರಾಜ್ಯಪಾಲರಿಗೆ ದೂರು ನೀಡಿದ್ದರು. ನೊಂದ ಮಹಿಳೆಗೆ ನ್ಯಾಯ ಕೊಡುವುದು ಸರಕಾರ ಮತ್ತು ರಾಜ್ಯಪಾಲರ ಕರ್ತವ್ಯ.ಸಂತೋಷ್ ಜೀವ ಉಳಿಸಲು ನಿಮ್ಮಿಂದ ಆಗಿಲ್ಲ. ಪತ್ನಿಯ ಕಣ್ಣೀರಾದರೂ ಒರೆಸುವ ಪ್ರಯತ್ನ ಮಾಡಿ.ಈ ಪ್ರಕರಣದಲ್ಲಿ ಸರಕಾರ ಕನಿಷ್ಠ ತನಿಖೆಯಾದರೂ ಮಾಡಬೇಕು.ಈ ಮೂಲಕ ರಾಜ್ಯದ ಮಹಿಳೆಯರಿಗೆ ನಿಮ್ಮ ಪರ ಇದ್ದೇವೆ ಎಂಬ ಸಂದೇಶವಾದರೂ ಕೊಡಿ.ಈ ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ಇಡೀ ಕರ್ನಾಟಕದ ಮಹಿಳೆಯರಿಗೆ ದ್ರೋಹ ಬಗೆದಂತೆ. ಮಹಿಳೆಯರು ರಾಜ್ಯ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ,ಒಂದು ಸಮುದಾಯದ ಬೆಂಬಲವಿದ್ದರೆ ಸಿಎಂ ಆಗಲು ಸಾಧ್ಯವಿಲ್ಲ ಎಂಬ ಜಮೀರ್ ಹೇಳಿಕೆಗೂ ಪ್ರತಿಕ್ರಿಯೆ ನೀಡಿದರು. ಎಲ್ಲ ಸಮುದಾಯವನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗಿ ಎಂಬುದು ಜಮೀರ್ ಅಹಮದ್ ಹೇಳಿಕೆ ಅರ್ಥ. ಸಮಪಾಲು ಸಮಬಾಳು ಎಂಬ ಅರ್ಥದಲ್ಲಿ ಜಮೀರ್ ಮಾತಾಡಿದ್ದಾರೆ.ಕಾಂಗ್ರೆಸ್ ಪಕ್ಷದ ಜೊತೆ ಎಲ್ಲ ವರ್ಗ, ಸಮುದಾಯದವರಿದ್ದಾರೆ.ಆದರೆ ಬಿಜೆಪಿ ಲಿಂಗಾಯತ, ಒಕ್ಕಲಿಗ, ಎಸ್ಸಿ ಎಸ್ಟಿ ಯಾರಿಗೂ ಏನೂ ಮಾಡಿಲ್ಲ.ಎಲ್ಲ ಸಮುದಾಯದವರು ನೆಮ್ಮದಿಯಿಂದ ಜೀವನ ನಡೆಸುವಂತೆ ಆಡಳಿತ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ.ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಸಿದ್ದರಾಮ ಉತ್ಸವದ ಕುರಿತು ಪ್ರತಿಕ್ರಿಯೆ ನೀಡಿದ ಅವರು , ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಸ್ವತಃ ಡಿಕೆ ಶಿವಕುಮಾರ್ ಅವರೇ ಈ ಬಗ್ಗೆ ಕರೆಕೊಟ್ಟಿದ್ದಾರೆ. ಸಮಾವೇಶದಲ್ಲಿ ಸಿದ್ದರಾಮಯ್ಯ ಆಡಳಿತ ಮತ್ತು ಈಗಿನ ಬಿಜೆಪಿ ಆಡಳಿತ ಜನರ ಮುಂದಿಡುತ್ತೇವೆ ಎಂದು ಹೇಳಿದರು.
PublicNext
22/07/2022 04:58 pm